ಸಾಮಾಜಿಕ ಜಾಲತಾಣಗಳಲ್ಲಿ ಆಮೀರ್ ಖಾನ್‌ರವರ ಹೊಸ ಚಿತ್ರ ಲಾಲ್ ಸಿಂಗ್ ಛಡ್ಡಾ ವನ್ನು ಬಹಿಷ್ಕರಿಸುವಂತೆ ಕೆಲವರು ಅಭಿಯಾನ ಆರಂಭಿಸಿದ್ದಾರೆ.
ಇದು ಟ್ವಿಟರ್‌ನಲ್ಲಿ ಇದು ಟ್ರೆಂಡ್ ಆಗಿದೆ. ಇದಕ್ಕೆ ನಟ ಆಮೀರ್ ಖಾನ್ ಉತ್ತರಿಸಿದ್ದಾರೆ.
ಬಾಲಿವುಡ್ಡನ್ನು ಬಹಿಷ್ಕರಿಸಲಿ, ಆಮೀರ್ ಖಾನ್‌ನನ್ನು ಬಹಿಷ್ಕರಿಸಲಿ, ಅಷ್ಟೇ ಏಕೆ, ಲಾಲ್ ಸಿಂಗ್ ಛಡ್ಡಾವನ್ನೂ ಬಹಿಷ್ಕರಿಸಲಿ. ಆದರೆ, ಆಮೀರ್ ಖಾನ್‌ಗೆ ಭಾರತದ ಮೇಲೆ ಪ್ರೀತಿಯಿಲ್ಲ ಎನ್ನುತ್ತಿರುವುದು ನನಗೆ ಹೆಚ್ಚು ಬೇಸರ ತರಿಸಿದೆ.
ನಾನು ನಿಜಕ್ಕೂ ನನ್ನ ದೇಶ ಭಾರತವನ್ನು ಪ್ರೀತಿಸುತ್ತೇನೆ. ಇದನ್ನು ಅರಿಯದ ಜನ ನನ್ನ ಬಗ್ಗೆ ಅಪಪ್ರಚಾರ ಮಾಡುವುದು ನನಗೆ ಬೇಸರ ತರಿಸಿದೆ ಎಂದಿದ್ದಾರೆ.
ಜೊತೆಗೆ ದಯವಿಟ್ಟು ಸಿನಿಮಾವನ್ನು ನೋಡಿ ಎಂದೂ ಮನವಿ ಮಾಡಿದ್ದಾರೆ.
