ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಸಿಹಿ ಸುದ್ದಿ ನೀಡಿದೆ.
ಕೆಆರ್ ಪುರಂವರೆಗೆ ಬೆಂಗಳೂರು ಮೆಟ್ರೋ ನೇರಳೆ ಮಾರ್ಗ ವಿಸ್ತರಣೆಯಾಗಿದ್ದು ಇದರ ಪ್ರಾಯೋಗಿಕ ಓಡಾಟ ಸೆಪ್ಟೆಂಬರ್ನಿಂದ ನಡೆಯಲಿದೆ.
ಈ ವರ್ಷ ಡಿಸೆಂಬರ್ ವೇಳೆಗೆ ವೈಟ್ಫೀಲ್ಡ್ವರೆಗೆ ಮಾರ್ಗ ವಿಸ್ತರಣೆಯನ್ನು ಪೂರ್ಣಗೊಳಿಸಲು ಮೆಟ್ರೊ ರೈಲು ನಿಗಮವು ಪ್ರಯತ್ನಿಸುತ್ತಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ ಪರ್ಪಲ್ ಲೈನ್ ವಿಸ್ತರಣೆಯ ಬೈಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ಗೆ ಸೆಪ್ಟೆಂಬರ್ನಲ್ಲಿ ಪ್ರಾಯೋಗಿಕ ಚಾಲನೆ ಪ್ರಾರಂಭವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ನೇರಳೆ ಮಾರ್ಗದ ಪ್ರಯೋಗಿಕ ಓಡಾಟ ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿದ್ದು, ಬಿಎಂಆರ್ಸಿಎಲ್ ಡಿಸೆಂಬರ್ 2022 ರೊಳಗೆ ವೈಟ್ಫೀಲ್ಡ್ಗೆ ವಿಸ್ತರಣೆಯನ್ನು ಪೂರ್ಣಗೊಳಿಸಲಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.