Tuesday, July 28, 2026
Tuesday, July 28, 2026

ಕೃಷಿ ವಲಯಕ್ಕೆ ಪೂರಕವಾಗಿ ₹ 23 ಸಾವಿರ ಕೋಟಿ ಮೌಲ್ಯದ ಯೋಜನೆ ಪ್ರಸ್ತಾವನೆ ಸ್ವೀಕೃತ

Date:

ಕೃಷಿ ವಲಯಕ್ಕೆ ಪೂರಕವಾದ ವಿನೂತನ ಯೋಜನೆಗಳಿಗೆ ಹಣಕಾಸು ಸೌಲಭ್ಯ ಒದಗಿಸುವ ಕೇಂದ್ರದ ಕೃಷಿ ಮೂಲಸೌಕರ್ಯ ನಿಧಿ’ ಅಡಿ ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಒಟ್ಟಾರೆ 23 ಸಾವಿರ ಕೋಟಿ ಮೊತ್ತದ ವಿವಿಧ ಪ್ರಕಾರದ ಪ್ರಸ್ತಾವನೆಗಳು ಸ್ವೀಕರಿಸಲಾಗಿದ್ದು, ಈ ಪೈಕಿ 13 ಸಾವಿರ ಕೋಟಿ ಮೊತ್ತದ ಯೋಜನೆಗಳು ಪರಿಗಣನೆ ಹಂತದಲ್ಲಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದರು.

ಶೈತ್ಯಾಗಾರ, ಗೋದಾಮುಗಳು ಸೇರಿದಂತೆ ಕೊಯ್ಲೋತ್ತರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 2020ರಲ್ಲಿ ಈ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಿದೆ.

ಇದರಡಿ ಬ್ಯಾಂಕ್‌ಗಳ ಮೂಲಕ ಒಂದು ಲಕ್ಷ ಕೋಟಿ ರೂ.ವರೆಗೂ ಹಣಕಾಸು ನೆರವು ನೀಡಲು ಅವಕಾಶ ಇದೆ. ಇದರಲ್ಲಿ ಈವರೆಗೆ 23 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇದರಲ್ಲಿ 13 ಸಾವಿರ ಕೋಟಿ ಮೊತ್ತದ ಯೋಜನೆಗಳು ಅನುಮೋದನೆಯ ಹಲವು ಹಂತಗಳಲ್ಲಿದ್ದು, ಈ ಪೈಕಿ ಒಂಬತ್ತು ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಬ್ಯಾಂಕ್‌ಗಳ ಮೂಲಕ ಹಣ ಬಿಡುಗಡೆ ಆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದವರಾರೂ ದೊಡ್ಡ ಕಂಪೆನಿಗಳ ಮಾಲಿಕರಲ್ಲ. ರೈತರು, ರೈತ ಉತ್ಪಾದಕ ಸಂಘಗಳಾಗಿವೆ. ವಿನೂತನ ಯೋಜನೆಗಳಿಗೆ ಈ ನಿಧಿ ಅಡಿ ವೇದಿಕೆ ಕಲ್ಪಿಸಲಾಗುತ್ತದೆ. ಬ್ಯಾಂಕ್‌ಗಳ ಮೂಲಕ ಕನಿಷ್ಠ ಬಡ್ಡಿದರ (ಶೇ. 3)ದಲ್ಲಿ ಸಾಲಸೌಲಭ್ಯ ಕಲ್ಪಿಸಲಾಗುತ್ತದೆ. ಯೋಜನೆ ಅವಧಿ 2025-26ರವರೆಗೆ ಇರಲಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka State Brahmin Development Board ವಿಪ್ರ ಸ್ವ- ಉದ್ಯಮ ನೇರ ಸಾಲ ಯೋಜನೆ: ಅರ್ಜಿ ಆಹ್ವಾನ

Karnataka State Brahmin Development Board ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ...

Rotary Club of Shivamogga ವೈದ್ಯರು ಉಚಿತವಾಗಿ ನೀಡುವ ಸಲಹಾ ಸೌಲಭ್ಯ ಬಳಸಿಕೊಳ್ಳಿ- ಎನ್.ಗೋಪಿನಾಥ್

Rotary Club of Shivamogga ವೈದ್ಯರು ಉಚಿತವಾಗಿ ನೀಡುತ್ತಿರುವ ಸಲಹೆಗಳನ್ನು ಬಳಸಿಕೊಳ್ಳಿ...

Klive Special Article ತೆರಿಗೆಯು ಜೇನ್ನೊಣವು ಹೂವಿನಿಂದ ಜೇನು ಸಂಗ್ರಹಿಸುವಂತೆ ಇರಬೇಕು

ವಿಶೇಷ ಲೇಖನ: ಆರ್.ಮನೋಹರ್.ತೆರಿಗೆ ಸಲಹೆಗಾರ. ಶಿವಮೊಗ್ಗ. Klive Special Article ಆದಾಯ ತೆರಿಗೆ...