ಇರಾಕಿ ಕುರ್ದಿಶ್ ಮೂಲದ ಬ್ರಿಟಿಷ್ ವ್ಯಕ್ತಿಯೊಬ್ಬರು ಈ ವರ್ಷ ಹಜ್‌ನಲ್ಲಿ ಭಾಗಿಯಾಗಲು ಇಂಗ್ಲೆಂಡ್‌ನ ವಾಲ್ವರ್‌ಹ್ಯಾಂಪ್ಟನ್‌ನಿಂದ 6,500 ಕಿಮೀ ಕಾಲ್ನಡಿಗೆಯಲ್ಲಿ ನಡೆದು ಮೆಕ್ಕಾ ತಲುಪಿದ್ದಾರೆ.
52 ವರ್ಷದ ಆಡಮ್ ಮೊಹಮ್ಮದ್, ನೆದರ್ಲ್ಯಾಂಡ್ಸ್, ಜರ್ಮನಿ, ಆಸ್ಟ್ರಿಯಾ, ಹಂಗೇರಿ, ಸರ್ಬಿಯಾ, ಬಲ್ಗೇರಿಯಾ, ಟರ್ಕಿ, ಲೆಬನಾನ್ ಮತ್ತು ಜೋರ್ಡಾನ್ ಮೂಲಕ ಸೌದಿ ಅರೇಬಿಯಾವನ್ನು ತಲುಪಲು ಸುಮಾರು 6,500 ಕಿಲೋಮೀಟರ್ ದೂರವನ್ನು 10 ತಿಂಗಳು ಮತ್ತು 25 ದಿನಗಳಲ್ಲಿ ಕ್ರಮಿಸಿದರು. ಆಡಮ್ ಆಗಸ್ಟ್ 1, 2021 ರಂದು ಯುಕೆ ನಲ್ಲಿ ನಡೆಯಲು ಪ್ರಾರಂಭಿಸಿ, ಕಳೆದ ತಿಂಗಳು ಸೌದಿ ಅರೇಬಿಯಾಕ್ಕೆ ತಲುಪಿದರು.
ಆಡಮ್ ತಮ್ಮ ಲಗ್ಗೇಜ್‌ನೊಂದಿಗೆ ಪ್ರತಿ ದಿನ ಸರಾಸರಿ ಕಾಲ್ನಡಿಗೆಯಲ್ಲೇ 17.8 ಕಿಮೀ ಕ್ರಮಿಸಿದರು.
ಶಾಂತಿ ಮತ್ತು ಸಮಾನತೆಯ ಸಂದೇಶವನ್ನು ಸಾರುವುದು ಅವರ ಉದ್ದೇಶವಾಗಿದೆ.
ಅವರು ಸ್ವತಃ ಪುಟವನ್ನು ಸಹ ಸ್ಥಾಪಿಸಿದ್ದರು. ಅದರಲ್ಲಿ, ‘ನಾನು ಇದನ್ನು ಕೇವಲ ಖ್ಯಾತಿ ಅಥವಾ ಹಣಕ್ಕಾಗಿ ಮಾಡುತ್ತಿಲ್ಲ. ನಮ್ಮ ಜಾತಿ, ಬಣ್ಣ, ಧರ್ಮವನ್ನು ಲೆಕ್ಕಿಸದೆ ನಾವೆಲ್ಲರೂ ಸಮಾನರು ಎಂದು ಜಗತ್ತಿಗೆ ತಿಳಿಸಲು ಮತ್ತು ನಮ್ಮ ಧರ್ಮ ಇಸ್ಲಾಂ ಕಲಿಸುವ ಶಾಂತಿ ಮತ್ತು ಏಕತೆಯ ಸಂದೇಶವನ್ನು ಸಾರಲು ಇದು ಸಹಾಯಕ ಎಂದಿದ್ದಾರೆ.