ಪ್ಯಾಕೇಟ್ ಉತ್ಪನಗಳ ಮೇಲೆ ಜಿಎಸ್‌ಟಿ ವಿಧಿಸಿದ ಪರಿಣಾಮ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಪ್ಯಾಕೇಟ್ ಮಾಡಿದ ತನ್ನ ಉತ್ಪನ್ನಗಳ ಬೆಲೆ ಏರಿಸಲು ಯೋಜಿಸಿದೆ.
ಇದರಿಂದ ರೈತ ಸಮುದಾಯವು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ಯಾಕೇಟ್ ಮಾಡಿದ ವಸ್ತುಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತುರುವುದಾಗಿ ತಿಳಿಸಿತ್ತು. ಪ್ಯಾಕೇಟ್ ಮಾಡಿದ ಆಹಾರಧಾನ್ಯಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ಶೇ.5ರಷ್ಟು ತೆರಿಗೆ ಹೇರಲಾಗಿದೆ. ಅದರಂತೆ ಪ್ಯಾಕೇಟ್ ಮಾಡಲಾದ ಹಾಲಿನ ಉತ್ಪನ್ನಗಳಾದ ಪನ್ನೀರ್, ಹಾಲು, ಮೊಸಲು, ಲಸ್ಸಿ, ಮಜ್ಜಿಗೆ ಇನ್ನಿತರ ಹೈನುಗಾರಿಕೆ ಆಧಾರಿತ ವಸ್ತುಗಳ ಮೇಲೆ ಶೇ.5ರಷ್ಟು ಅಧಿಕ ತೆರಿಗೆ ಬೀಳಲಿದೆ.
ಕೇಂದ್ರ ಈ ನಿರ್ಧಾರಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ತೆರಿಗೆ ಹೇರಿಕೆ ನಿರ್ಧಾರಿಂದ ರಾಜ್ಯದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಅತೀ ದೊಡ್ಡ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮೊಸರು ದರವನ್ನು ಲೀಟರ್‌ಗೆ 2.2 ರೂ, ಲಸ್ಸಿ ಲೀಟರ್‌ಗೆ 3.75 ರೂ. ಹಾಗೂ ಮಜ್ಜಿಗೆ ಲೀಟರ್‌ಗೆ 3 ರೂ. ಹೆಚ್ಚಿಸಲು ಚಿಂತನೆ ನಡೆಸಿದೆ. ಇನ್ನು ಪನ್ನೀರ್ ಕೇಜಿಗೆ 15 ರೂ. ಹೆಚ್ಚಾಗುವ ಸಾಧ್ಯತೆ ಇದೆ. ಇದು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೊರೆ ಆಗಲಿದೆ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ ಕೆಎಂಎಫ್ ನಿತ್ಯ ಮೊಸರು, ಲಸ್ಸಿ, ಮಜ್ಜಿಗೆ ಮತ್ತು ಪನ್ನೀರ್ ಸಂಪೂರ್ಣ ವಹೀವಾಟಿನಲ್ಲಿ ದಿನಕ್ಕೆ ಅಂದಾಜು 22 ಲಕ್ಷ ರು, ಹಣವನ್ನು ಜಿಎಸ್‌ಟಿ ರೂಪದಲ್ಲಿ ಸರ್ಕಾರಕ್ಕೆ ಪಾವತಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಕೆಎಂಎಫ್ ಕೆಎಂಎಫ್ ನಿತ್ಯ ಅಂದಾಜು 5,000 ಕೇಜಿ ಪನ್ನೀರ್, 15,000 ಲೀ. ಮಜ್ಜಿಗೆ, 15,000 ಲೀ. ಲಸ್ಸಿ ಹಾಗೂ 9ಲಕ್ಷ ಲೀ. ಮೊಸರನ್ನು ಮಾರಾಟ ಮಾಡುತ್ತದೆ ಎಂದು ತಿಳಿದು ಬಂದಿದೆ. ದರ ಏರಿಕೆ ಕುರಿತು ಕೆಎಂಎಫ್ ಸ್ಪಷ್ಟ ಮಾಹಿತಿ ನೀಡಬೇಕಿದೆ.