Friday, March 27, 2026
Friday, March 27, 2026

ಸಮರ್ಪಕ ತನಿಖೆ ನಡೆಸಿ ಪೋಲಿಸ್ ಇಲಾಖೆಯ ಗೌರವವುಳಿಸಿ- ಹೈಕೋರ್ಟ್ ನುಡಿ

Date:

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಗೌರವ ಉಳಿಸುವ ರೀತಿ‌ ಸಮರ್ಪಕ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಡಿಜಿ ಪಿಎಸ್ ಸಂಧು ಅವರಿಗೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾ. ಹೆಚ್.ಪಿ.ಸಂದೇಶ್ ರವರಿದ್ದ ಏಕಸದಸ್ಯ ಪೀಠ ಸಿಐಡಿ ಡಿಜಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳು, ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಹಲವರ ಮೇಲೆ ಆರೋಪಗಳಿವೆ.

ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳಿದ್ದಾರೆ. ಹಾಗಾಗಿ ಸಮರ್ಪಕ ತನಿಖೆ ನಡೆಯುವ ಅವಶ್ಯಕತೆಯಿದೆ. ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ.ಕೋರ್ಟ್ ಪ್ರಕರಣದ ತನಿಖೆಯ ನಿಗಾ ವಹಿಸಲಿದೆ ಎಂದು ಹೇಳಿದರು.

ಅಲ್ಲದೆ, ಪಿಎಸ್‌ಐ ನೇಮಕದಲ್ಲೇ ಭ್ರಷ್ಟಾಚಾರ ಗಂಭೀರ ವಿಚಾರ, ತನಿಖೆಯಿಂದ ಸತ್ಯಸಂಗತಿ ಹೊರಬೀಳಬೇಕು. ಇದರ ಹಿಂದೆ ಯಾರೇ ಸಚಿವರಾಗಿರಲೀ, ಯಾವುದೇ ಅಧಿಕಾರಿಗಳಾಗಿರಲೀ ಭಾಗಿಯಾಗಿದ್ದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿ ಡಿಜಿ ಪಿ.ಎಸ್ ಸಂಧು ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜು.7ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಆದೇಶಿಸಿತು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಜಾಗೃತ್ ಮತ್ತು ರಚನಾ ಹನುಮಂತ ಹೈಕೋರ್ಟ್ ಮೊರೆ ಹೋಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ...

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ...

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ...

Online shopping ಆನ್ ಲೈನ್ ಶಾಪಿಂಗ್ ಬಗ್ಗೆ ಬಹಳ ಜಾಗರೂಕರು ಹಾಗು ಜಾಣರಾಗಿರಿ- ಟಿ.ಶಿವಣ್ಣ.

Online shopping ಇತ್ತೀಚಿನ ಕಾಲಮಾನದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚುತ್ತಿದೆ. ಆನ್‌ಲೈನ್ ಶಾಪಿಂಗ್...