Wednesday, December 10, 2025
Wednesday, December 10, 2025

ಮಮತೆಯ ನವಿರು ನೆನಪು

Date:

ಓದಿಗಾಗಿ ಮನೆ ತೊರೆದು ದೂರದ ಊರಿಗೆ ಬಂದು 11 ವರ್ಷ ಕಳೆದಾಯಿತು. ಎಂದೊ ಓಮ್ಮೆ ಒಂದೆರಡು ದಿನ ರಜೆ ಸಿಕ್ಕಾಗಲೆಲ್ಲಾ ಊರಿಗೆ ಹೋಗುವುದೇ ಸಂಭ್ರಮ.

ಹೀಗೆ ಇತ್ತಿಚೆಗೆ ಊರಿಗೆ ಹೋಗಿದ್ದೆ. ಎರಡು ದಿನ ಮನೆಯ ವಾತಾವರಣ, ಅಮ್ಮನ ಅಡುಗೆ, ಟಿವಿ ರಿಮೋಟ್ ಗಾಗಿ ತಂಗಿಯೊಂದಿಗಿನ ಜಗಳ ಎಲ್ಲ ನೆನಪಿನಿಂದ ಮಾಸಿರಲ್ಲಿಲ್ಲ.
ಅಷ್ಟರಲ್ಲೇ ಎರಡು ದಿನ ಕಳೆದಿದ್ದೇ ಗೋತ್ತಾಗಲಿಲ್ಲ.

ಮಾರನೇಯ ದಿನ ಒಲ್ಲದ ಮನಸ್ಸಿನಿಂದ ಬೇಗ ಎದ್ದು ಫ್ರೆಶ್ ಆಗಿ ನಿಂತೆ. ತಿಂಡಿ ತಿನ್ನುವಷ್ಟು ಟೈಮ್ ಇರಲ್ಲಿಲ್ಲ. ಹಾಗಾಗಿ ತಿಂಡಿ ಬಾಕ್ಸ್ ಗೆ ತುಂಬಿ ಹೊರಟೆ. ಅಷ್ಟರಲ್ಲೇ ಅಮ್ಮನ ಬೈಗುಳ ಶುರುವಾಯಿತು. ಎಲ್ಲದಕ್ಕೂ ಅವಸರ ಕರೆಕ್ಟ್ ಆಗಿ ತಿಂಡಿಯೂ ತಿನ್ನೋದಿಲ್ಲ. ಬೆಳೆಯೋ ಮಕ್ಕಳು ಚೆನ್ನಾಗಿ ತಿನ್ನಬೇಕು ಎನ್ನುವುದು ಅವರ ವಾದ.. ಬೆಳಿಗ್ಗೆ ಬೆಳಿಗ್ಗೆ ಮಂಗಳಾರತಿ ಮಾಡಿಸಿಕೊಂಡು
ಬಸ್ ಸ್ಟ್ಯಾಂಡ್ ಕಡೆ ಹೊರಟೆ.

ಮನೆಯಿಂದ ದೂರ ಹೋಗುವ ದುಃಖ ಒಂದು ಕಡೆಯಾದರೆ, ತಿಂಡಿ ತಿನ್ನದೇ ಪ್ರಯಾಣ ಮಾಡುವಾಗ ಆಗುವ ತಳಮಳ ಇನ್ನೋಂದು ಕಡೆ.. ಟೈಮ್ ಆದರೂ ಬಸ್ ಸ್ಟ್ಯಾಂಡ್ ಗೆ ಬಸ್ ಬಂದಿರಲ್ಲಿಲ್ಲ. ಬಸ್ ಮಿಸ್ ಆಗಿ ಬಿಡ್ತಾ..ಅಥವಾ ಇನ್ನೂ ಬಂದೇ ಇಲ್ಲವಾ ವಾಪಸ್ ಮನೆಗೆ ಹೋಗದೇ ಮತ್ತೆ ಬೈಸಿಕೊಳ್ಳಬೇಕಾ ಎನ್ನುವ ನೂರಾರು ಪ್ರಶ್ನೆಗಳು ತಲೆಯಲ್ಲಿ ಓಡಾಡುತ್ತಿದ್ದವು.

ಅಷ್ಟರಲ್ಲೇ ಒಂದು ಹಳೆಯ ಕಾಲದ ಬೈಕ್ ನಲ್ಲಿ ಒಬ್ರು ಅಂಕಲ್ ನಾನು ನಿಂತಲ್ಲಿಯೇ ಬಂದ್ರು. ಅವರ ವೇಷ ಭೂಷಣ ನೋಡಿದ್ರೆ ರೈತರು ಅಂತಾ ಅನಿಸುತ್ತಿತ್ತು. ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದರು.. ಬಸ್ ಬರದೇ ಇರುವ ಟೆನ್ಷನ್ ನಲ್ಲಿ ನಾನಿದ್ದೇ, ಅವರು ನನ್ನನ್ನೇ ನೋಡುತ್ತಿದ್ದದ್ದು ಒಂತರಾ ಮುಜುಗರ ಉಂಟು ಮಾಡಿತು.. ಅವರನ್ನು ನೋಡಿದಾಗಲೆಲ್ಲಾ ಸಿಟ್ಟು ಇನ್ನಷ್ಟು ಜಾಸ್ತಿಯಾಗುತ್ತಿತ್ತು.. ಅವರು ನನ್ನನ್ನೇ ನೋಡುತ್ತಾ ಮುಂದಕ್ಕೆ ಹೋದರು ಆಗ ನಾನು ನಿಟ್ಟುಸಿರು ಬಿಟ್ಟೆ. ಒಮ್ಮೆ ಹಂಗೆ ಹಿಂದಕ್ಕೆ ತಿರುಗಿ ನೋಡಿದೆ. ಅವರು ನನ್ನ ನೋಡಿ ಮುಗುಳ್ನಗುತ್ತಾ ಹೇಗಿದ್ದಿಯಾ ಪುಟ್ಟಿ ಅಂದರೂ, ನನಗೆ ಏನು ಮಾತನಾಡಬೆಕೆಂದು ಅರ್ಥವೇ ಆಗಲಿಲ್ಲ. ಅಷ್ಟರಲ್ಲೇ ಅವರೇ ಮಾತು ಮುಂದುವರಿಸಿ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ.. ಈಗ ಏನು ಮಾಡುತ್ತಿದ್ದಿಯಾ ಎಂದು ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಅಷ್ಟರಲ್ಲೇ ನನ್ನ ಬಸ್ ಬಂತು ನಾನು ಬಸ್ ಹತ್ತಿ ಹೊರಟೆ.. ಆಗ
ತಟ್ಟನೇ ಹಳೆಯ ನೆನಪು ಕಣ್ಣ ಮುಂದೆ ಕತೆಯಾಗಿ ನಿಂತಿತ್ತು.. ಕಣ್ಣಂಚಿನಲ್ಲಿ ನೀರು ಬಂದಿದ್ದು ತಿಳಿಯಲೇ ಇಲ್ಲ.

ಇದು ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ನಡೆದ ಘಟನೆ. ನಾನು ನಾಲ್ಕನೇ ತರಗತಿಯಲ್ಲಿ ಇದ್ದೆ. ನಮ್ಮೂರಿನಿಂದ ಅಜ್ಜಿಯ ಊರಿಗೆ ಎಂಟು ಕಿಲೋಮೀಟರ್ ಅಂತರ. ಒಂದು ದಿನ ಅಜ್ಜಿಯ ಊರಿಗೆ ಕರೆದುಕೊಂಡು ಹೋಗು ಎಂದು ಒಂದೇ ಸಮನೆ ಅಳುತ್ತಿದ್ದೆ. ಅಮ್ಮ ನಿನಕ್ಕಿಂತ ಸಣ್ಣ ಮಕ್ಕಳು ಬಸ್ ನಲ್ಲಿ ಒಬ್ಬರೇ ಶಾಲೆಗೆ ಬರುತ್ತಾರೆ .ನೀನು ಒಬ್ಬಳೇ ಹೋಗುವುದಾದರೆ ಹೋಗು ನನ್ನ ತಲೆ ತಿನ್ನಬೇಡ ಎಂದು ಗದರಿದರು. ನಾನೂ ಒಬ್ಬಳೇ ಹೋಗಲು ನಿರ್ಧರಿಸಿ ಅಮ್ಮನ
ಹತ್ತಿರ 5 ರೂಪಾಯಿ ತೆಗೆದುಕೊಂಡು ಹೊರಟೆ.
ಮನೆಯಿಂದ ಹೊರಡುವಾಗ ಅಮ್ಮ 10 ಸಲ ಹೇಳಿದ್ದರು ನೀಲಿ ಬಣ್ಣದ ಬಸ್ ಹತ್ತಬೇಕು . ನಿನಗೆ ಎಲ್ಲಿ ಇಳಿಯುವುದು ಎಂದು ಅರ್ಥವಾಗದೆ ಇದ್ದರೆ ಕಂಡಕ್ಟರ್ ಹತ್ತಿರ ಹೇಳು ಎಂದರು. ನಾನೂ ಖುಷಿಯಿಂದಲೇ ಬಸ್ ಸ್ಟ್ಯಾಂಡ್ ಗೆ ಹೋದೆ.. ಅಜ್ಜಿ ಊರಿಗೆ ಹೋಗಲು ಎರಡು ರೂಪಾಯಿ ಸಾಕು. ಆ ಕಡೆಯಿಂದ ಬರುವಾಗ ಅಜ್ಜಿ ದುಡ್ಡು ಕೊಡುತ್ತಾರೆ ಎನ್ನುವುದು ಗೊತ್ತಿತ್ತು. ಹಾಗಾಗಿ ಅಂಗಡಿಯಲ್ಲಿ 3 ರೂಪಾಯಿಯದ್ದು ತಿಂಡಿ ತೆಗೆದುಕೊಂಡು ತಿಂದು ತೇಗಿದ್ದಾಯಿತು. ಅಷ್ಟರಲ್ಲೇ ನೀಲಿ ಬಣ್ಣದ ಬಸ್ ಸ್ಟ್ಯಾಂಡ್ ಗೆ ಬಂದಿತ್ತು. ನಾನು ಬಸ್ ಹತ್ತಿ ಕುಳಿತೆ. ಬಸ್ ಹೊರಟು ಸ್ವಲ್ಪ ದೂರದವರೆಗೂ ಸಾಗಿ ಬಲಕ್ಕೆ ತಿರುಗಿದಾಗಲೇ ಗೊತ್ತಾಗಿದ್ದು ನಾನು ಬೇರೆ ಊರಿಗೆ ಹೋಗುವ ಬಸ್ ಹತ್ತಿದ್ದೇನೆಂದು.. ಜೋರಾಗಿ ಶುರು ಮಾಡಿದೆ.. ಬಸ್ ಇಳಿದು ನೋಡಿದೆ ಅಲ್ಲೊಂದು ದೊಡ್ಡ ಮರವಿತ್ತು.. ಅಲ್ಲಿ ಕುಳಿತು ಅಳುತ್ತಿದ್ದೆ. ನನ್ನನ್ನು ನೋಡಿದೆ ಒಬ್ಬ ಅಂಕಲ್ ನನ್ನ ಹತ್ತಿರಕ್ಕೆ ಬಂದು ನಿನ್ನ ಹೆಸರೇನು ? ಎಲ್ಲಿಗೆ ಹೋಗಬೇಕಿತ್ತು ? ಅಂತೆಲ್ಲಾ ವಿಚಾರಿಸಿದರು.. ನಂತರ ಅವರ ಸೈಕಲ್ ನಲ್ಲಿ ಕೂರಿಸಿಕೊಂಡು ಅವರ ಮನೆಗೆ ಕರೆದುಕೊಂಡು ಹೋದರು. ಅವರ ಹೆಂಡತಿ ನನಗಾಗಿ ಆಲೂಗಡ್ಡೆ ಸಾಂಬಾರ್ ಮಾಡಿದ್ದರು. ರಾತ್ರಿ ಅವರ ಮನೆಯಲ್ಲೇ ಹೊಟ್ಟೆ ತುಂಬಾ ಉಳಿದು ಊಟಾ ಮಾಡಿ ಮಲಗಿದೆ.. ಮನೆಯಲ್ಲಿ ಅಮ್ಮ ನಾನು ಅಜ್ಜಿಯ ಮನೆಯಲ್ಲಿ ಇದಿನಿ ಎಂದು. ಅಜ್ಜಿ ನಾನು ನಮ್ಮೂರಲ್ಲೇ ಇದಿನಿ ಎಂದುಕೊಂಡಿದ್ದರು.. ಬೆಳಕಾದ ನಂತರ ಆ ಅಂಕಲ್ ನನ್ನ ಕೇಳಿದರು ಎಲ್ಲಿಗೆ ಬಿಡಲಿ ನಿನ್ನ ? ಅಜ್ಜಿಯ ಮನೆಗೊ ? ಅಮ್ಮನ ಮನೆಗೊ?.. ಎಂದು.. ಅಮ್ಮನ ಹತ್ತಿರ ಹೋದರೇ ಗ್ಯಾರಂಟಿ ಒದೆ ಬಿಳುತ್ತದೆ ಎಂದು ಗೋತ್ತಿತ್ತು ನನಗೆ ಹಾಗಾಗಿ ..ನಮ್ಮೂರಿನ ಬಸ್ ಸ್ಟ್ಯಾಂಡ್ ಗೆ ಬಿಡಿ ಎಂದೆ.. ಅವರು ನನ್ನ ಸೈಕಲ್ ನಲ್ಲಿ ಕೂರಿಸಿಕೊಂಡು ನಮ್ಮ ಮನೆಯ ದಾರಿಯನ್ನೇ ಹಿಡಿದರು.. ನನಗಾಗಲೇ ಭಯ ಶುರುವಾಗಿತ್ತು.. ಡೈರೆಕ್ಟ್ ಆಗಿ ನಮ್ಮ ಮನೆಯ ಬಾಗಿಲಿಗೇ ಹೋಗಿ ಸೈಕಲ್ ನಿಲ್ಲಿಸಿದರು.

ಹೆದರುತ್ತಲೇ ನಾನು ಮನೆಯ ಒಳ ನಡೆದೆ.. ಅಂಕಲ್ ನಡೆದ ಕತೆಯನ್ನೆಲ್ಲಾ ಅಮ್ಮನಿಗೆ ಹೇಳಿ , ಇವಳ ಅಪ್ಪ ನನ್ನ ಸ್ನೇಹಿತ ಕಂಡ್ರಿ ಎಂದರು.
ಅಮ್ಮ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದರು.. ಅವರು ಹೊರಟ ತಕ್ಷಣ ನನಗಾಗಲೇ ಮಂಗಳಾರತಿ ಶುರುವಾಗಿತ್ತು…
ಆನಂತರದಿಂದ ಅಂಕಲ್ ಹಾಗೂ ನನ್ನ ನಡುವೆ ಎನೋ ಒಂದು ಅವಿನಾಭಾವ ಸಂಬಂಧ ಬೆಳೆದಿತ್ತು… ರಜೆಗೆ ಮನೆಗೆ ಹೋದಾಗಲೆಲ್ಲ.. ಅವರ ಮನೆಗೆ ಒಂದು ವಿಸಿಟ್ ಇರುತ್ತಿತ್ತು.. ಇಂದಿಗೂ ಅವರನ್ನು ನೆನಪಿಸಿಕೊಂಡಾಗ ಗೊತ್ತಿಲ್ಲದ ಹಾಗೆ ಕಣ್ಣಂಚಲ್ಲಿ ನೀರು.. ತುಟಿಯಂಚಿನಲ್ಲಿ ಸಣ್ಣ ಕಿರುನಗೆ ಮೂಡುತ್ತದೆ….

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಡಿಸೆಂಬರ್ 12 & 13, ಶಿವಮೊಗ್ಗದಲ್ಲಿ ಕಂದಾಯ ಇಲಾಖಾ ನೌಕರರಿಂದ ” ಕಂದಾಯೋತ್ಸವ”- ವಿ.ಅಭಿಷೇಕ್

DC Shivamogga ಒತ್ತಡದಲ್ಲಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ತಮ್ಮ...

MESCOM ಡಿಸೆಂಬರ್ 11 & 12 ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಲ್ಲ, ಒಳ ಮಂಡಳಿ ಪ್ರಕಟಣೆ

MESCOM ಶಿವಮೊಗ್ಗ ನಗರದ ಮಂಡ್ಲಿ ಭಾಗದಲ್ಲಿ ಮೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ...

Department of School Education ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಗೆ ಸಮಗ್ರ ಚಾಂಪಿಯನ್ ಪಟ್ಟ

Department of School Education ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ...