Sunday, March 29, 2026
Sunday, March 29, 2026

ರಷ್ಯಾದ ಬಲ ಕುಗ್ಗಿಸಲು ಜಿ 7 ಶೃಂಗಸಭೆಯಲ್ಲಿ ವಿಸ್ತೃತ ಯೋಜನೆ

Date:

ಕಳೆದ ನಾಲ್ಕು ತಿಂಗಳಿಂದ ಯೂಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದ ಆರ್ಥಿಕತೆಗೆ ಪೆಟ್ಟು ನೀಡಲು ಜಗತ್ತಿನ ಏಳು ಶ್ರೀಮಂತ ದೇಶಗಳ ಕೂಟ ಜಿ7 ನಿರ್ಧರಿಸಿದ್ದು, ಅದಕ್ಕಾಗಿ ತಂತ್ರವನ್ನು ಹೆಣೆಯುತ್ತಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣದ ಮೇಲೆ ಮಿತಿ ಹೇರುವುದು ಹಾಗೂ ಅದು ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಸುಂಕ ಏರಿಸುವ ಮೂಲಕ ಅದರ ಆದಾಯದ ಬಲ ಕುಂದಿಸುವ ಬಗ್ಗೆ ಶೃಂಗ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಬ್ರಿಟನ್ ಸಹಿತ ಹಲವು ದೇಶಗಳು ಅದಕ್ಕೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.

ರಷ್ಯಾದ ಸರಕುಗಳ ಮೇಲಿನ ಸುಂಕ ಹೆಚ್ಚಿಸುವುದು, ರಷ್ಯಾದ ನೂರಾರು ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸುವುದು ಮುಂತಾದ ಕ್ರಮಗಳ ಮೂಲಕವೂ ಯೂಕ್ರೇನ್​ಗೆ ಬೆಂಬಲ ನೀಡುವ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ತೈಲ ಆಮದಿನ ಮಿತಿ ನಿಗದಿ ಪಡಿಸಿದರೆ ಅದರಿಂದ ರಷ್ಯಾದ ಆರ್ಥಿಕ ಪರಿಸ್ಥಿತಿ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ವಿಸ್ತ್ರತವಾದ ಯೋಜನೆಯನ್ನು ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಮುಂದಿನ ದಿನಗಳಲ್ಲಿ ರೂಪಿಸಲಿದ್ದಾರೆ. ರಷ್ಯಾದಿಂದ ತೈಲ ಆಮದು ಕಡಿತ ಮಾಡುವ ಜಿ 7 ಕೂಟದ ನಿರ್ಧಾರಕ್ಕೆ ಬದ್ಧವಾದರೆ ಭಾರತಕ್ಕೆ ನಷ್ಟವಾಗುವ ಸಂಭವವಿದೆ. ಯಾಕೆಂದರೆ, ಭಾರತದ ತೈಲ ಆಮದಿನಲ್ಲಿ ರಷ್ಯಾದ ಪಾಲೇ ಶೇ.10ರಷ್ಟಿದೆ. ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ತೈಲ ಗ್ರಾಹಕ ದೇಶವಾಗಿದೆ. ಕಳೆದ 12 ತಿಂಗಳಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಶೇ. 0.2ರಿಂದ 50 ಪಟ್ಟು ಹೆಚ್ಚಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ರಷ್ಯಾದಿಂದ 25 ಮಿಲಿಯ ಬ್ಯಾರೆಲ್ ತೈಲ ಆಮದು ಕೊಳ್ಳಲಾಗಿದೆ. ಪಾಶ್ಚಿಮಾತ್ಯ ದೇಶಗಳ ಒತ್ತಡವಿದ್ದರೂ ಭಾರತ ಹಾಗೂ ಚೀನಾ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿ ನ್ ಕೆಲ ದಿನಗಳ ಹಿಂದೆ ಹೇಳಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kote SeethaRamanjaneya Temple ವೈಭವದಿಂದ ನಡೆದ ಶ್ರೀಆಂಜನೇಯಸ್ವಾಮಿ ರಥೋತ್ಸವ

Kote SeethaRamanjaneya Temple ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ...

Department of Kannada and Culture ಶ್ರೀಅಗ್ನಿಬನ್ನಿರಾಯಸ್ವಾಮಿಯವರ ಇತಿಹಾಸವನ್ನ ನಾವೆಲ್ಲಾ ತಿಳಿದುಕೊಳ್ಳಬೇಕು- ಆನಂದ್.

Department of Kannada and Culture ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು...

Rotary Club Shimoga ಚಿನ್ನ,ಬೆಳ್ಳಿ ಧಾರಣೆ ವ್ಯತ್ಯಾಸಕ್ಕೆ ಜಾಗತಿಕ ಸಮಸ್ಯೆಗಳೇ ಕಾರಣ- ಸೆಂಥಿಲ್ ವೆಲನ್.

Rotary Club Shimoga ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ....

S. N. Channabasappa ಮಾದಕ ದ್ಯವ್ಯ ವ್ಯಸನ ವಿರೋಧಿ ಕ್ರಮಗಳಿಗೆ ವಿಶೇಷ ಕಾರ್ಯಪಡೆ ರಚನೆ ಮಾಡಿ- ಎಸ್.ಎನ್.ಚನ್ನಬಸಪ್ಪ.

S. N. Channabasappa ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು ಮತ್ತು ಮಾದಕ...