ಪ್ರತಿ 02 ಸೆಕೆಂಡ್‌ಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದ್ದು ನಾವುಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ಸಮಾಜಸೇವಾ ಕಾರ್ಯಕ್ಕೆ ಮುಂದಾಗಬೇಕೆಂದು ಪ್ರೊ.ಬಿ.ಪಿ.ವೀರಭದ್ರಪ್ಪ ಎಂದು ಕರೆಕೊಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ಮತ್ತು ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ, ಸಂಯುಕ್ತ ಆಸ್ಪತ್ರೆ, ಬಿ.ಆರ್ ಪ್ರಾಜೆಕ್ಟ್, ಆರೋಗ್ಯ ಕೇಂದ್ರ, ಕುವೆಂಪು ವಿವಿ ಮತ್ತು ರಕ್ತನಿಧಿ ಕೇಂದ್ರ ಮೆಗ್ಗಾನ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ರಕ್ತದಾನದಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವುದರಿಂದ ವಿಶ್ವವಿದ್ಯಾಲಯ ಹಾಗೂ ಪೋಷಕರ ಗೌರವವನ್ನು ಹೆಚ್ಚಿಸುವಂತಹ ಕಾರ್ಯಗಳನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು.
ಶಿಬಿರದಲ್ಲಿ ವಿವಿಯ ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದು 250ಕ್ಕಿಂತ ಹೆಚ್ಚು ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.ರಾಮೇಗೌಡ, ಪ್ರೊ.ಅಂಜನಪ್ಪ, ಕುವೆಂಪು ವಿವಿಯ ವೈದ್ಯಾಧಿಕಾರಿ ಡಾ.ರಕ್ಷಾ, ಡಾ,ಉಷಾ, ಮೆಗ್ಗಾನ್ ಆಸ್ಪತ್ರೆಯ ಡಾ.ದಿಕ್ಷಾಂತ್ ಬಾಟಿ, ಡಾ.ಸಂಜನಾ, ಡಾ. ದಿವ್ಯಾ, ಸಂಯುಕ್ತ ಆಸ್ಪತ್ರೆ ಬಿ.ಆರ್.ಪ್ರಾಜೆಕ್ಟ್‌ನ ಡಾ.ಹಂಸವೇಣಿ, ಸೇರಿದಂತೆ ವಿವಿಯ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು