Monday, November 25, 2024
Monday, November 25, 2024

ಹೊಸಪೇಟೆಯಲ್ಲಿ ಸ್ಟಾರ್ ಪುನೀತ್ ಪ್ರತಿಮೆ ಅನಾವರಣಸಡಗರದ ವಾತಾವರಣ

Date:

ಹೂಮಳೆಯ ನಡುವೆ ನಗರಕ್ಕೆ ಹರಿದುಬಂದ ಜನಸಾಗರ,ಕಳೆದ ಭಾನುವಾರ ರಾತ್ರಿ ನಟ, ದಿವಂಗತ ಪುನೀತ್‌ ರಾಜಕುಮಾರ್‌ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ದಿವಂಗತ ಪುನೀತ್ ರಾಜ್ ಕುಮಾರ್ ಅವರ ಅಣ್ಣ ನಟ ರಾಘವೇಂದ್ರ ರಾಜಕುಮಾರ್ ಮತ್ತು ಪತ್ನಿ ಮಂಗಳಾ ಅನಾವರಣಗೊಳಿಸಿದರು.

7.4 ಅಡಿ ಎತ್ತರದ ಅಪ್ಪು ಪುತ್ಥಳಿಯನ್ನು ಆಂಧ್ರಪ್ರದೇಶದ ಗುಂಟೂರಿನ ತೆನಾಲಿಯಲ್ಲಿ ತಯಾರಿಸಿದ ನಂತರ ನಗರಕ್ಕೆ ತರಲಾಗಿದೆ. ಒಟ್ಟು 6.4 ಲಕ್ಷ ರೂಪಾಯಿ ವೆಚ್ಚದಲ್ಲಿ ಪುತ್ಥಳಿ ನಿರ್ಮಾಣವಾಗಿದ್ದ ಇಂದು ಅನಾವರಣ ಮಾಡಲಾಯಿತು.

ಈ ಸಂಧರ್ಭದಲ್ಲಿ ಹೊಸಪೇಟೆಯ ನಟ ಅಜೆಯ್‌ ರಾವ್, ವಿಜಯನಗರದ ಜನಪ್ರೀಯ ಸಚಿವರಾದ ಮಾನ್ಯ ಶ್ರೀ ಆನಂದ್‌ ಸಿಂಗ್‌, ನಿರ್ಮಾಪಕರಾದ ಶ್ರೀ ಸಂತೋಷ್‌ ಆನಂದ್‌ ರಾವ್‌ ಉಪಸ್ಥಿತರಿದ್ದರು.

ಪುನೀತ್‌ರಾಜ್ ಅವರ ಅಭಿಮಾನಿಗಳು, ಅವರ ಭಾವಚಿತ್ರವಿದ್ದ ಟೀ–ಶರ್ಟ್‌, ಧ್ವಜ, ಭಾವಚಿತ್ರ ಹಿಡಿದು ಪಾಲ್ಗೊಂಡಿದ್ದರು.

ಅಪ್ಪು… ಅಪ್ಪು.. ಮತ್ತೆ ಹುಟ್ಟಿ ಬನ್ನಿ ಎಂದು ಸಮಾರಂಭದಲ್ಲಿ ಜಯಘೋಷ ಹಾಕಿದರು. ಹೊಸಪೇಟೆ ಕುರಿತು ಪುನೀತ್‌ರಾಜ್ ಮಾತನಾಡಿದ ಆಡಿಯೋ, ವಿಡಿಯೋ ಕ್ಲಪ್ ಗಳನ್ನು ಈ ಸಂಧರ್ಭದಲ್ಲಿ ಪ್ರಸಾರ ಮಾಡಲಾಯಿತು.

ಶ್ರೀ ರಾಘವೇಂದ್ರ ರಾಜಕುಮಾರ್‌ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಿದ ಬಳಿಕ ಮಾತನಾಡುತ್ತಾ ,ನಮ್ಮ ತಂದೆ ಹೋದಾಗ ನಾವು ಅನಾಥರು ಎಂದು ಅನಿಸಿರಲಿಲ್ಲ. ತಾಯಿ ಹೋದಾಗ ನಾವು ತಬ್ಬಲಿ ಅನಿಸಿರಲಿಲ್ಲ. ಆದರೆ, ನನ್ನ ತಮ್ಮ ಪುನೀತ್‌ ರಾಜಕುಮಾರ್‌ನನ್ನು ಕಳೆದುಕೊಂಡ ನಂತರ ನಾವು ಹಾಗೂ ಈ ಅಭಿಮಾನಿ ಬಳಗ ಅನಾಥರಾಗಿ ತಬ್ಬಲಿಯಾಗಿದ್ದೇವೆ ಎಂದೆನಿಸುತ್ತದೆ ಎಂದು ಹೇಳಿ ಭಾವುಕರಾದರು.

ರಾಘವೇಂದ್ರ ರಾಜಕುಮಾರ್‌
ಪುನೀತ್‌ ಅವರು ಚಿಕ್ಕ ವಯಸ್ಸಿನಿಂದಲೇ ಸಾಧನೆ ಮಾಡುತ್ತ ಮೇಲೆ ಬಂದವರು. ನಾವೆಲ್ಲರೂ ಅವರ ನಿಜವಾದ ಅಭಿಮಾನಿಗಳು ಆಗಿದ್ದರೆ ಅವರಂತೆ ಸಾಧನೆ ಮಾಡಬೇಕು. ಹೊಸಪೇಟೆಯಲ್ಲಿ 4ರಿಂದ 5 ಲಕ್ಷ ಜನರಿದ್ದೀರಿ. ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಬೆಳೆಸಬೇಕು. ಪರಿಸರ ದಿನಾಚರಣೆ, ಈ ದಿನ ಸಂಕಲ್ಪ ಮಾಡಿದರೆ ಉತ್ತಮ. ಅಲ್ಲದೇ, ಪ್ರತಿಯೊಬ್ಬರೂ ರಕ್ತದಾನ ಮಾಡಿ ಜೀವ ಉಳಿಸಬೇಕು. ಇದು ಪುನೀತ್‌ ಅವರಿಗೆ ಸಲ್ಲಿಸುವ ಗೌರವ. ಅಭಿಮಾನಿ ದೇವರುಗಳೇ ನಿಮ್ಮ ಪಾದಕ್ಕೆ ನಮಸ್ಕಾರ ಎಂದು ಹೇಳಿ ನಟ ರಾಘವೇಂದ್ರ ರಾಜಕುಮಾರ್‌ ಮಾತು ಮುಗಿಸಿದರು.

ಕಾರ್ಯಕ್ರಮಕ್ಕೆ ಹರಿದು ಬಂದ ಅಭಿಮಾನಿಗಳು ಪುನೀತ್‌ ಅವರನ್ನು ನೆನೆದು ಸಮಾರಂಭದಲ್ಲಿ ಕಂಚಿನ ಪುತ್ಥಳಿ ಅನಾವರಣ ಸಂಧರ್ಭದಲ್ಲಿ ಅವರ ಅಭಿಮಾನಿಗಳ ಸಂಭ್ರಮದ ನಡುವೆ ಅನೇಕರು ಭಾವುಕರಾದರು.

ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಜನ ಬಂದಿದ್ದರಿಂದ ಹಳೆಯ ಶಾನಬಾಗ್ ಸರ್ಕಲ್ ನಲ್ಲಿ ಜನಸಾಗರವೇ ಇತ್ತು. ಹೆಸರಾಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಕ್ಲಿ ಭಕ್ತರು ಸೇರುವ ಹಾಗೆ ಜನ ಸೇರಿ ನಿಲ್ಲುವುದಕ್ಕೂ ಜಾಗ ಇರಲಿಲ್ಲ. ಆದರೆ, ಹೇಗಾದರೂ ಮಾಡಿ ಕಾರ್ಯಕ್ರಮ ಕಣ್ತುಂಬಿಕೊಳ್ಳಬೇಕೆಂದೇ ಬಂದಿದ್ದ ಅಭಿಮಾನಿಗಳು ಅಕ್ಕಪಕ್ಕದ ಕಟ್ಟಡಗಳು, ಕಂಬಗಳು, ಕಾಂಪೌಂಡ್‌, ಮರಗಳನ್ನೇರಿ ಕುಳಿತು ವೀಕ್ಷಿಸಿದರು.

ಸಂಜೆ 5-30 ಕ್ಕೆ ಸಂಗೀತ ರಸಮಂಜರಿಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಸ್ಥಳೀಯ ಕಲಾವಿದರು ಪುನೀತ್‌ ಅವರ ಚಲನಚಿತ್ರದ ಹಾಡುಗಳು ಹಾಡಿದರು. ಅದಕ್ಕೆ ನೃತ್ಯ ಮಾಡಿ ಬಂದ ಜನರನ್ನು ರಂಜಿಸಿದರು. ರಾತ್ರಿ 7.35ಕ್ಕೆ ಪುನೀತ್‌ ಅವರ ಅಣ್ಣ ರಾಘವೇಂದ್ರ ರಾಜಕುಮಾರ್‌, ಅವರ ಪತ್ನಿ ಮಂಗಳಾ, ನಟ ಅಜೇಯ್‌ ರಾವ್‌, ಪ್ರವಾಸೋದ್ಯಮ ಸಚಿವರಾದ ಮಾನ್ಯ ಶ್ರೀ ಆನಂದ್‌ ಸಿಂಗ್‌ ವೇದಿಕೆಗೆ ಬಂದು ಎಲ್ಲರಿಗೂ ಕೈಮುಗಿದರು. ನಂತರ ಕೆಳಗಿಳಿದು ರಿಮೋಟ್‌ ಸಹಾಯದಿಂದ ಪುತ್ಥಳಿ ಅನಾವರಣಗೊಳಿಸಿದರು. ಪುತ್ಥಳಿ ಮೇಲೆ ಹೂಮಳೆಗರೆಯಲಾಯಿತು. ಈ ವೇಳೆ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅನೇಕರು ಭಾವುಕರಾಗಿ ಕಣ್ಣೀರು ಹಾಕಿದರು. ಎದೆ ಬಡಿದುಕೊಂಡು ಪುನೀತ್‌ ನೆನೆದರು. ಗಣ್ಯರು ಪುನಃ ವೇದಿಕೆಗೆ ಬಂದು ಪುನೀತ್‌ ಅವರ ಸಾಧನೆ ಗುಣಗಾನ ಮಾಡಿದರು.

ಕಾರ್ಯಕ್ರಮದ ಮಧ್ಯೆ ಕಿಡಿಗೇಡಿಗಳು ಗಣ್ಯರಿಗೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಗಣ್ಯರ ಗ್ಯಾಲರಿಗೆ ನುಗ್ಗಿದರು. ವೇದಿಕೆಯ ಸುತ್ತಮುತ್ತ ಜನಜಾತ್ರೆ ನೆರೆದಿತ್ತು. ಇದರಿಂದ ಗಾಬರಿಗೊಂಡ ಮಹಿಳೆಯರು, ಹಿರಿಯ ನಾಗರಿಕರು ಸ್ಥಳದಿಂದ ತೆರಳಿ ತಮ್ಮ ತಮ್ಮ ಮನೆಗಳಿಗೆ ಸೇರಿದರು. ಜನ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಲಾಠಿ ಬೀಸಿದರು. ಸ್ವತಃ ಸಚಿವ ಆನಂದ್‌ ಸಿಂಗ್‌ ಕೂಡ ಜನರತ್ತ ಧಾವಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಮನವಿ ಮಾಡಿದರು ಆ ವೇಳೆಗಾಗಲೇ ಸುಮಾರು 500 ಕ್ಕೂ ಹೆಚ್ಚು ಆಸನಕ್ಕಾಗಿ ಹಾಕಲಾಗಿದ್ದ ಚೇರ್ ಗಳನ್ನು ಕಿಡಿಗೇಡಿಗಳು ಮುರಿದ ಪರಿಣಾಮ ಕಾರ್ಯಕ್ರಮ ಸರಿಯಾಗಿ ನೆಡೆಯದೆ ನಿಲ್ಲಿಸಲಾಯಿತು.

ಈ ಕಾರ್ಯಕ್ರಮದ ವಿಶೇಷ ಎಂದರೆ ಕಾರ್ಯಕ್ರಮದುದ್ದಕ್ಕೂ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ವೇದಿಕೆಯ ಮೇಲೆ ಹೊಳೆಯುತ್ತ ಇದ್ದರು. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಅವರು ಎಲ್ಲಾ ಕಡೆ ಓಡಾಡಿದರು. ಕಾರ್ಯಕ್ರಮ ನಡೆಸಿಕೊಟ್ಟ ಪ್ರತಿಯೊಬ್ಬ ಕಲಾವಿದನಿಗೂ ಸನ್ಮಾನಿಸಿದರು. ನಿರೂಪಕರು ಕೂಡ ಅವರನ್ನು ಹಾಡಿ ಹೊಗಳಿದರು. ಪ್ರಾಸ್ತಾವಿಕವಾಗಿ ಭಾಷಣ ಕೂಡ ಮಾಡಿದರು. ಆದರೆ, ಸಚಿವ ಆನಂದ್‌ ಸಿಂಗ್‌ ವೇದಿಕೆ ಮೇಲೆ ಮಾತಾಡಲಿಲ್ಲ. ಕೊನೆಯವರೆಗೂ ಅತ್ತಿಂದಿತ್ತ ಓಡಾಡುತ್ತ ಜನರನ್ನು ನಿಯಂತ್ರಿಸುವ ಕೆಲಸ ಮಾಡಿದರು.

ಅಜೆಯ್ ಮಾತನಾಡುತ್ತ ಅಪ್ಪು ಅಭಿಮಾನಕ್ಕೆ ನಾನು ಬಂದೆ ನಾನು ಹೊಸಪೇಟೆಯವನು. ಪುನೀತ್‌ ರಾಜಕುಮಾರ್‌ ಅಭಿಮಾನಿ ಕೂಡ, ಪ್ರೀತಿಯಿಂದ ಇಲ್ಲಿಗೆ ಬಂದಿರುವೆ. ಒಬ್ಬ ವ್ಯಕ್ತಿ ಇಷ್ಟೊಂದು ಜನ ಅಭಿಮಾನಿಗಳನ್ನು ಗಳಿಸಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.

ಇದಕ್ಕೆ ಕಾರಣ ಅವರು ಮಾಡಿದ ಕಾರ್ಯಗಳು. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ ಎಂದು ನಟ ಅಜೇಯ್‌ ರಾವ್‌ ಹೇಳಿದರು.

ಜನರು ಅಜೆಯ್ ರವರ ಭಾಷಣಕ್ಕೂ ಸಹ ಅಡ್ಡಿ ಮಾಡಿದರು.

ಈ ಸಂಧರ್ಭದಲ್ಲಿ ಹೆಸರಾಂತ ಹಾಡುಗಾರರಾದ ಶ್ರೀ ಗುರುಕಿರಣ್ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು ಕಾರ್ಯಕ್ರಮ ಸರಿಯಾಗಿ ನೆಡೆದಿಲ್ಲದೆ ಜನರ ಮುಖದಲ್ಲಿ ಬೇಸರ ಹೆಚ್ಚಾಗಿತ್ತು. ಅಪ್ಪು ಅಭಿಮಾನಿಗಳುಸಹ ಅವರ ಪ್ರತಿಮೆ ಮುಂದೆ ಸೆಲ್ಪಿ ತೆಗೆದುಕೊಂಡು ಗೌರವ ಸೂಚಿಸುವ ದೃಶ್ಯವು ಸಹ ಮುಂದುವರೆದಿದೆ.

ವರದಿ ಕೃಪೆ: ಮುರುಳಿಧರ್ ನಾಡಿಗೇರ್ ಹೊಸಪೇಟೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...