Thursday, April 9, 2026
Thursday, April 9, 2026

ಕಾಲಿವುಡ್ ಜೋಡಿಗೆ ಕಂಕಣಬಲ

Date:

ಕಾಲಿವುಡ್‌ನಲ್ಲಿ ಸದ್ಯದ ಚರ್ಚೆ ಯ ವಿಷಯವೆಂದರೆ, ಲೇಡಿ ಸೂಪರ್ ಸ್ಟಾರ್ ನಯನಾತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ವಿಚಾರ.

ಈ ಜೋಡಿ ಇವರೆಗೂ ಮದುವೆಯ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ. ಈಗ ಸುದ್ದಿಗೋಷ್ಠಿಯಲ್ಲಿ ವಿಘ್ನೇಶ್ ಶಿವನ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.
ಜತೆಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಕ್ಷಿಣದ ಚಿತ್ರರಂಗದಲ್ಲಿ ಸದ್ಯ ಹಸೆಮಣೆ ಏರುತ್ತಿರೋ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣನೆ ಶುರುವಾಗಿದೆ.

ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಘ್ನೇಶ್, ತಾವು ಮತ್ತು ನಯನತಾರಾ ಮದುವೆಯಾಗುತ್ತಿರುವ ಕುರಿತು ಅಧಿಕೃತವಾಗಿ ಹೇಳಿದ್ದಾರೆ. ʻರೌಡಿ ಧಾನ್ʼ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿ, ಅಲ್ಲಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇದೀಗ 7 ವರ್ಷಗಳ ನಂತರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಕುರಿತು ಮಾತನಾಡಿರುವ ವಿಘ್ನೇಶ್, ಇಲ್ಲಿಯವರೆಗೂ ತಮ್ಮ ಸಿನಿಮಾಗೆ ಮತ್ತು ನಮ್ಮ ಖಾಸಗಿ ಜೀವನಕ್ಕೆ ಬೆಂಬಲಿಸಿದ ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಈ ವೇಳೆ, ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್‌ಗೆ ನಿರ್ದೇಶನ ಮಾಡುವ ಕುರಿತು ಅಧಿಕೃತವಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಅನೌನ್ಸ್ ಮಾಡಿದ್ದಾರೆ. ಇದೇ ಜೂನ್ 9ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ.

ಮದುವೆಯ ಬಳಿಕ ಚೆನ್ನೈನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಇನ್ನು ನೆಚ್ಚಿನ ಜೋಡಿಯ ಮದುವೆಯನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...