ರಾಷ್ಟ್ರ ರಾಜಧಾನಿ ನವದೆಹಲಿಯ ಲ್ಯೂಟೆನ್ಸ್ ಪ್ರದೇಶದಲ್ಲಿರುವ ಬಂಗಲೆಗಳಲ್ಲಿ ಠಿಕಾಣಿ ಹೂಡಿರುವ ರಾಜಕೀಯ ಪಕ್ಷಗಳು ಅಲ್ಲಿಂದ ಕಾಲೆಂಗೆಯಲೇಬೇಕಾಗಿದೆ. ಹೀಗೆಂದು, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿ ಅತ್ಯಾಧುನಿಕವಾಗಿರುವ ಕೇಂದ್ರ ಕಚೇರಿಯನ್ನು ಬಿಜೆಪಿ ಹೊಂದಿದ್ದರು. ಸರ್ಕಾರಿ ಬಂಗಲೆಗಳಲ್ಲಿ ಬಿಜೆಪಿ ವಾಸ್ತವ್ಯ ಹೂಡಿರುವುದನ್ನು ಮುಂದುವರಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ನಗರ ವ್ಯವಹಾರಗಳು ಮ
ಹಾಗೂ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ,ವೈಯಕ್ತಿಕವಾಗಿ ಒಬ್ಬರನ್ನು ಸರ್ಕಾರಿ ಬಂಗಲೆಗಳಿಂದ ತೆರವುಗೊಳಿಸುವುದು ಕಷ್ಟ.
ಈಗ ನಾವು ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ತೆರವುಗೊಳಿಸುತ್ತಿಲ್ಲ ಎಂಬ ಟೀಕೆಯನ್ನು ಇನ್ನು ಮಾಡಲಾರರು ಎಂದು ತಿಳಿದು ಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಬಂಗಲೆಗಳಿಂದ ರಾಜಕೀಯ ಪಕ್ಷಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಏಕೆಂದರೆ, ಎಲ್ಲಾ ರಾಜಕೀಯ ಪಕ್ಷಗಳಿಗೂ ಕಚೇರಿ ನಿರ್ಮಿಸಲು ಜಮೀನು ನೀಡಲಾಗಿದೆ ಎಂದಿದ್ದಾರೆ.
