ಯಾರೆಲ್ಲ, ಮನೆ ಕಟ್ಟೋಕೆ ಯೋಚಿಸುತ್ತಿದ್ದಿರೋ, ಅವರಿಗೆ ಇಲ್ಲಿದೆ ನೋಡಿ ಸಿಹಿ ಸುದ್ದಿ. ಅದೇನು ಅಂದ್ರೇ, ಕೇಂದ್ರ ಸರ್ಕಾರ ಈ ಕುರಿತು ಉಕ್ಕಿನ ಮೇಲಿನ ಸುಂಕ ವಿಧಿಸಿದ ಕಾರಣ ಉಕ್ಕಿನ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಕಳೆದ 2 ವಾರದಲ್ಲಿ ಮಾರುಕಟ್ಟೆಯಲ್ಲಿ ಉಕ್ಕಿನ ದರ ಶೇ. 10 ರಷ್ಟು ಕಡಿಮೆಯಾಗಿದೆ.
ಸುಮಾರು 2 ತಿಂಗಳ ಅವಧಿಯಲ್ಲಿ ಪ್ರತಿ ಟನ್ ಉಕ್ಕಿನ ಬೆಲೆ 15,000 ರೂ. ಕುಸಿತ ಕಂಡಿದೆ.
ಮೇ 18 ರಿಂದ ಇದುವರೆಗೆ ಶೇ.8 ರಷ್ಟು ಟನ್ ಗೆ 5500 ರೂ. ಕಡಿಮೆಯಾಗಿ ಪ್ರತಿಟನ್ ಉಕ್ಕಿನ ಬೆಲೆ 63,800 ರೂ.ಗೆ ಇಳಿದಿದೆ. ಏಪ್ರಿಲ್ ಮೊದಲ ವಾರ 78,800 ರೂ. ದರ ಇತ್ತು. ಕೇಂದ್ರ ಸರ್ಕಾರ ಮೇ 22 ರಿಂದ ಜಾರಿಗೆ ಬರುವಂತೆ ಉಕ್ಕಿನ ಮೇಲೆ ಶೇ.15ರಷ್ಟು ರಫ್ತು ಸುಂಕ ವಿಧಿಸಿದೆ. ಹಣದುಬ್ಬರ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಉಕ್ಕಿನ ದರ 15 ಸಾವಿರ ರೂಪಾಯಿವರೆಗೂ ಕಡಿಮೆಯಾಗಿದೆ.
