Saturday, December 6, 2025
Saturday, December 6, 2025

ಮೋಟಾರು ವಾಹನಗಳ ದೋಷಪೂರಿತ ನಂಬರ್ ಪ್ಲೇಟ್ ಸರಿಪಡಿಸಿ-ಕುಮಾರ್

Date:

ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಜೂನ್ 10 ರೊಳಗೆ ಸರಿಪಡಿಸಿಕೊಳ್ಳದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ವಾಹನ ಸವಾರರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

7 ದಿನದೊಳಗಾಗಿ ನಂಬರ್‌ ಪ್ಲೇಟ್‌ ದೋಷ ಸರಿಪಡಿಸಿಕೊಳ್ಳದಿದ್ದರೆ 2 ಬಾರಿ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತದೆ.

3ನೇ ಬಾರಿಯೂ ತಪ್ಪು ತಿದ್ದಿಕೊಳ್ಳದೇ ಇದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಇಲಾಖೆ ಮಾಹಿತಿ ತಿಳಿಸಿದೆ.

ಸಾರಿಗೆ ಇಲಾಖೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಟಿಎಚ್‌ಎಂ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರಿಗೆ ದೋಷಯುಕ್ತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಚಿತ್ರಗಳನ್ನು ಕಳುಹಿಸಲು ಇಲಾಖೆಯು ಹೊಸ ವಾಟ್ಸಾಪ್ ಅನ್ನು ಪ್ರಾರಂಭಿಸಲಾಗಿದೆ.9449863459 ಈ ನಂಬರ್ ಗೆ ಫೋಟೋ ಅಪ್‌ಲೋಡ್ ಮಾಡಿ ಕಳುಹಿಸಬಹುದು. ಇದರಿಂದ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕಳುಹಿಸುವವರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ. ತಪ್ಪಾದ ಫಾಂಟ್‌ಗಳು, ಫ್ಯಾನ್ಸಿ ಡಿಸೈನ್ ಮತ್ತು ಸರ್ಕಾರಿ ಸಂಸ್ಥೆಗಳು ಮತ್ತು ಏಜೆನ್ಸಿಗಳ ಹೆಸರನ್ನು ಸರ್ಕಾರಿ ವಾಹನಗಳಿಗೆ ಬಳಸಲಾಗುತ್ತಿದೆ ಎಂದು ಕುಮಾರ್ ಹೇಳಿದರು. ಹೈಕೋರ್ಟ್ ಆದೇಶದ ಬಳಿಕ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಜನರಿಗೆ ಈಗಾಗಲೇ ಅದರ ಬಗ್ಗೆ ತಿಳಿದಿದೆ ಎಂದು ಅವರು ಹೇಳಿದರು.

ಹೈಕೋರ್ಟ್ ಆದೇಶದ ಹೊರತಾಗಿಯೂ, ಜನರು ತಮ್ಮ ವಾಹನಗಳಿಗೆ ಸರಿಯಾದ ನಂಬರ್ ಪ್ಲೇಟ್‌ಗಳನ್ನು ಸರಿಪಡಿಸಲು ವಿಫಲರಾಗಿದ್ದಾರೆ. ಆದ್ದರಿಂದ,ಈ ವಾಹನಗಳ ಮೇಲೆ ನಿಗಾ ಇಡಲು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದರು. ಮಾಲೀಕರು ಅಥವಾ ಸಂಸ್ಥೆಗಳು ನಂಬರ್ ಪ್ಲೇಟ್‌ಗಳಲ್ಲಿ ಹೆಸರುಗಳು ಅಥವಾ ವಿನ್ಯಾಸಗಳನ್ನು ಸ್ಥಾಪಿಸಲು ಬಯಸಿದರೆ, ಅವರು ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.

ಮೊದಲ ಬಾರಿ ಅಪರಾಧ ಎಸಗಿದವರಿಗೆ 500 ರೂ., ಎರಡನೇ ಬಾರಿಗೆ 1,000 ರೂ. ದಂಡ ವಿಧಿಸಲಾಗುವುದು ಮತ್ತು ಮೂರನೇ ಬಾರಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಕುಮಾರ್ ವಿವರಿಸಿದರು.

ಏತನ್ಮಧ್ಯೆ, ವಾಹನ ನೋಂದಣಿ ಫಲಕದಲ್ಲಿ ನಿಗದಿತ ಫಾಂಟ್ ಗಾತ್ರವನ್ನು ಅನುಸರಿಸದ ವಾಹನ ಮಾಲೀಕರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ವಾಹನದ 4 ಕಡೆ ಸರಿಯಾದ ನಂಬರ್‌ ಪ್ಲೇಟ್‌ ಹಾಕದ, ಆಟೋ ಚಾಲಕರ ವಿವರ ಹಾಗೂ ಸಮವಸ್ತ್ರ ಧರಿಸದೇ ವಾಹನ ಚಲಾಯಿಸುವ ಚಾಲಕರ ಫೋಟೋ ತೆಗೆಯುವಂತೆ ಬೆಂಗಳೂರು ಟ್ರಾಫಿಕ್ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...