ಉಕ್ರೇನ್‌ನ ಪೂರ್ವ ಭಾಗದ ಮೇಲೆ ಕಂಟ್ರೋಲ್ ಸಾಧಿಸಲು ಒಂದೊಂದೇ ನಗರಗಳನ್ನ ಆಹುತಿ ಪಡಿಯುತ್ತಿರುವ ರಷ್ಯಾ ಈಗ ಯುಕ್ರೇನ್‌ನ ಮತ್ತೊಂದು ಇಂಪಾರ್ಟೆಂಟ್ ಸಿಟಿ ಸೆವೆರೊದೊನೆಸ್ಕ್‌ನ ಕೆಮಿಕಲ್ ಪ್ಲಾಂಟ್ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಲುಹಾನ್ಸ್ ಪ್ರದೇಶದ ಗವರ್ನರ್ ಸರ್ಜಿ ಗೈಡೇ ಮಾಹಿತಿ ನೀಡಿದ್ದು ರಷ್ಯಾ ನಮ್ಮ ನಗರದ ಮೇಲೆ ವಾಯುದಾಳಿ ಮಾಡಿದೆ. ಆತಂಕಕಾರಿ ವಿಚಾರ ಅಂದ್ರೆ ರಷ್ಯಾ ದಾಳಿ ನಡೆಸಿರೋದು ನೈಟ್ರಿಕ್ ಆಸಿಡ್ ಟ್ಯಾಂಕ್ ಮೇಲೆ. ಇದು ವಾತವಾರಣಕ್ಕೆ ಬಿಡುಗಡೆಯಾದರೆ, ಉಸಿರಾಟ, ಹಾಗೂ ಚರ್ಮ ಸಂಬಂಧಿತ ಭಯಾನಕ ಖಾಯಿಲೆಗಳು ಉಂಟಾಗಬಹುದು ಅಂತ ಹೇಳಿದ್ದಾರೆ.
ಕಳೆದ ವಾರವಷ್ಟೇ ಇದರ ಹತ್ತಿರಲ್ಲೇ ಇರುವ ಲಿಮೆನ್ ನಗರವನ್ನು ರಷ್ಯಾ ಪಡೆ ತನ್ನ ಕಂಟ್ರೋಲ್‌ಗೆ ತಗೊಂಡಿತ್ತು.
ಸ್ಟಾಟಜಿಕಲಿ ಇಂಪಾರ್ಟೆಂಟ್ ಆಗಿದ್ದ ಈ ಸಿಟಿಯನ್ನು ಕೈವಶ ಮಾಡಿಕೊಂಡಿದ್ದು ರಷ್ಯಾಗೆ ಪ್ಲಸ್ ಪಾಯಿಂಟ್ ಆಗಿತ್ತು.
ಇದಾದ ಬಳಿಕ ಸೆವೆರೊದೊನೆಸ್ಕ್ ನಗರದ ಮೇಲೆ ಕಣ್ಣಾಕಿರುವ ರಷ್ಯಾ, ಅದನ್ನ ವಶಕ್ಕೆ ಪಡೆಯಲು ಈಗ ವಿದ್ವಂಸಕ ರೀತಿಯಲ್ಲಿ ವಾಯುದಾಳಿ ಮಾಡಿದೆ ಎನ್ನಲಾಗಿದೆ.
