ಕುವೆಂಪು ವಿವಿಯ ಆಂತರೀಕ ಮೌಲ್ಯಮಾಪನ ಆಧರಿಸಿ ಪ್ರಮೋಟ್ ಮಾಡಿದ್ದ ದೂರಶಿಕ್ಷಣ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಫಲಿತಾಂಶ ರದ್ದುಪಡಿಸಿ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿತ್ತು.
ಆದರೆ ಇದುವರೆಗೂ ಮಧ್ಯಂತರ ತಡೆಯಾಜ್ಞೆಯನ್ನು ತೆರವಾಗಿಸಿಲ್ಲ.
ಈ ಕುರಿತು ಕುವೆಂಪು ವಿವಿಯ ಮೌಲ್ಯಮಾಪನ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮೇ.26ರಿಂದ ಆರಂಭವಾಗಬೇಕಿದ್ದಂತ ವಿವಿಯ ಪದವಿ ಪರೀಕ್ಷೆಯನ್ನು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕಾರಣ ಮುಂದೂಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಮೋಟ್ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿ ಪರೀಕ್ಷೆ ನಡೆಸುವ ವಿವಿ ನಿರ್ಧಾರವನ್ನು ಕೆಲವು ವಿದ್ಯಾರ್ಥಿಗಳು ಏಪ್ರಿಲ್ 21ರಂದು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿ, ಪರೀಕ್ಷೆಗೆ ತಡೆಯಾಜ್ಞೆ ತಂದಿದ್ದಾರೆ. ಈ ಕಾರಣದಿಂದ ಮುಂದೂಡಿಕೆ ಮಾಡಲಾಗಿದೆ. ಈ ಮೂಲಕ ಇದುವರೆಗೆ 4 ಬಾರಿ ಪರೀಕ್ಷೆ ಮುಂದೂಡಿಕೆ ಮಾಡಿದಂತೆ ಆಗಿದೆ.
