ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ವ್ಯವಸ್ಥೆ ಬಗ್ಗೆ ಗಮನ ಹರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜವಾಬ್ದಾರಿಯುತವಾದ ಒಂದು ಸೂಚನೆ ನೀಡಿದ್ದಾರೆ.
ಅದೇನು ಅಂದರೆ ಸಾಕು ನಾಯಿ ಸಾಕುವವರಿಗೆ ವಿಶೇಷ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮನೆಯಲ್ಲಿ ಸಾಕಿದ ನಾಯಿಗಳನ್ನು ಸಾಕುವವರು ಬೀದಿಗೆ ಬಿಟ್ಟು ಕೊಳಕು ಮಾಡಬಾರದು ಎಂದು ಹೇಳಿದ್ದಾರೆ.
ಅಗತ್ಯವಿದ್ದರೆ ಅವುಗಳ ನೋಂದಾಯಿಸಲು ಖಚಿತಪಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಲಸಿಕೆ ಹಾಕುವುದನ್ನು ಸಹ ಖಚಿತಪಡಿಸಿಕೊಳ್ಳಿ. ಮಹಾನಗರ ಪಾಲಿಕೆ ಮತ್ತು ಇತರೆ ಜವಾಬ್ದಾರಿಯುತ ಇಲಾಖೆಗಳು ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
ರಸ್ತೆ ನಿಮ್ಮ ಸೊಸೈಟಿಗೆ ಸೇರಿರಲಿ ಅಥವಾ ಮಹಾನಗರ ಪಾಲಿಕೆಗೆ ಸೇರಿರಲಿ, ಯಾರಾದರೂ ತಮ್ಮ ನಾಯಿಯನ್ನು ಶೌಚ ಮಾಡಿಸುವ ಉದ್ದೇಶದಿಂದ ಹೊರತಂದು ತಿರುಗಾಡಿಸುವುದನ್ನು ಕಂಡುಬಂದರೆ ತಕ್ಷಣವೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ವಾಸ್ತವವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಯಿ ಮಾಲೀಕರಿಗೆ ಅಂದರೆ ಸಾಕುಪ್ರಾಣಿಗಳ ಮಾಲೀಕರಿಗೆ ದೊಡ್ಡ ಆದೇಶವನ್ನು ಹೊರಡಿಸಿದ್ದಾರೆ. ನಾಯಿ ಸಾಕುವವರಿಗೆ ಸ್ವಚ್ಛತೆ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಯೋಗಿ, ಕಾನ್ಪುರ ಮತ್ತು ಲಖನೌ ನಾಯಿ ಮಾಲೀಕರಿಗೆ ಪ್ರಾಣಿಗಳನ್ನು ರಸ್ತೆಗೆ ಕರೆದೊಯ್ಯುವಾಗ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಹಾಗೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
