ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.
ಮೂರು ದಿನಗಳ ಚಿಂತನ ಶಿಬಿರದಲ್ಲಿ ಕೆಲ ಮಹತ್ವದ ನಿರ್ಧಾರಗಳಿಗೆ ಕಾಂಗ್ರೆಸ್ ಬದ್ಧತೆ ತೋರಿದೆ. ಶಿಬಿರದಲ್ಲಿ ನಿರ್ಧರಿಸಲಾದ ಕಾಂಗ್ರೆಸ್ ಆಂತರಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಮುಂದಿನ ಎರಡ್ಮೂರು ದಿನಗಳಲ್ಲಿ ಕಾರ್ಯಪಡೆ ರಚಿಸಲಾಗುವುದು. ಈ ವಿಚಾರವನ್ನು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದರು.
13 ದಶಕಗಳಷ್ಟು ದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಬದಲಾವಣೆಗೆ ತೆರೆದುಕೊಳ್ಳುವ ಮನಸು ಮಾಡಿದೆ.
ಪಕ್ಷದ ಪುನಾರಚನೆ, ಪಕ್ಷದ ಹುದ್ದೆಗಳಿಗೆ ನೇಮಕಾತಿ ನಿಯಮಗಳು, ಸಂವಹನ, ಪ್ರಚಾರ, ಹಣಕಾಸು, ಚುನಾವಣೆ ನಿರ್ವಹಣೆ ಇತ್ಯಾದಿ ಎಲ್ಲಾ ರೀತಿಯ ಅಂಶಗಳು ಈ ಆಂತರಿಕ ಸುಧಾರಣೆಗಳ ವ್ಯಾಪ್ತಿಗೆ ಬರುತ್ತವೆ ಎಕದರು.
ಚಿಂತನ ಶಿಬಿರ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, “ನಾವು ಸಮಸ್ಯೆ ನಿವಾರಿಸುತ್ತೇವೆ. ಇದು ನಮ್ಮ ದೃಢನಿಶ್ಚಯ, ಇದು ನಮ್ಮ ನಮ್ಮ ಸಂಕಲ್ಪ. ಕಾಂಗ್ರೆಸ್ ನವೋದಯ ಕಾಣಲಿದೆ” ಎಂದು ಆತ್ಮವಿಶ್ವಾಸದ ನುಡಿಗಳನ್ನು ಹೇಳಿದರು.