ಕೇಂದ್ರ ಸಾರಿಗೆ ಇಲಾಖೆಯಿಂದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯಗೊಳಿಸಲಾಗಿತ್ತು. ಈ ಕಾರಣಕ್ಕಾಗಿ ಅನೇಕ ವಾಹನಗಳಿಗೆ ಸಂಚಾರಿ ಪೊಲೀಸರು ದಂಡ ಕೂಡ ವಿಧಿಸುತ್ತಿದ್ದರು.
ಎಲ್ಲಾ ವಾಹನಗಳಿಗೂ ಸುರಕ್ಷತೆಯ ನೋಂದಣಿ ಫಲಕ ಕಡ್ಡಾಯವೇ ಎನ್ನುವ ಗೊಂದಲಕ್ಕೆ ಹಲವು ವಾಹನ ಸವಾರರಿದ್ದರು. ಆದರೆ ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಅದೇನು ಅಂದರೆ ಏಪ್ರಿಲ್ 1, 2019ಕ್ಕಿಂತ ಮೊದಲಿನ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಈ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿಯನ್ನು ಸಾರಿಗೆ ಇಲಾಖೆ ನೀಡಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿರುವಂತ ವಾಹನಗಳಿಗೆ ಎಚ್ ಎಸ್ ಆರ್ ಪಿ ಕಡ್ಡಾಯವಲ್ಲ. ಏಪ್ರಿಲ್ 1, 2019ರ ನಂತ್ರ ಖರೀದಿಸಿದಂತ ವಾಹನಗಳಿಗೆ ಕಡ್ಡಾಯವಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ. ಅಲ್ಲದೇ ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿದಂತ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಅಳವಡಿಸುವಂತೆ ಒತ್ತಾಯಿಸುವಂತಿಲ್ಲ ಎಂಬುದಾಗಿಯೂ ತಿಳಿಸಿದೆ.
ಏಪ್ರಿಲ್ 1, 2019ರ ನಂತರ ಖರೀದಿಸಿದಂತ ವಾಹನಗಳಿಗೆ ಮಾತ್ರವೇ ಎಚ್ ಎಸ್ ಆರ್ ಪಿ ಕಡ್ಡಾಯವಾಗಿದೆ. ಅದಕ್ಕೂ ಮೊದಲಿನ ವಾಹನಗಳಿಗೆ ಕಡ್ಡಾಯವಲ್ಲ. ಬೆಂಗಳೂರಿನಲ್ಲಿ ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿದಂತ ಸುಮಾರು 1.75 ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದಾಗಿಯೂ ತಿಳಿಸಿದೆ. ಈ ಮೂಲಕ ಸಂಚಾರಿ ಪೊಲೀಸರಿಂದ ಇಂತಹ ವಾಹನ ಸವಾರರಿಗೆ ಉಂಟಾಗುತ್ತಿದ್ದಂತ ಕಿರಿಕಿರಿಯನ್ನು ಸಾರಿಗೆ ಇಲಾಖೆ ತಪ್ಪಿಸಿದೆ.
