Friday, October 4, 2024
Friday, October 4, 2024

ಇಡ್ಲಿಯಜ್ಜಿಗೆ ₹12 ಲಕ್ಷದ ಮನೆ ಕೊಡುಗೆ

Date:

85 ವರ್ಷ ವಯಸ್ಸಿನ ವೃದ್ಧೆ. ಹೊಟ್ಟೆಪಾಡಿಗಾಗಿ ಇಡ್ಲಿ ಮಾರಾಟ ಮಾಡಿ ಜೀವಿಸುತ್ತಿದ್ದರು. ಈಗಾಗಲೇ ಮೂವತ್ತು ವರ್ಷಗಳು ಕಳೆದಿವೆ.
ಆರಂಭದಲ್ಲಿ ಇದ್ದ ಬೆಲೆ ಇಪ್ಪತ್ತೈದು ಪೈಸೆಗೆ ಒಂದು ಇಡ್ಲಿ. ಈಗ ಆರಾರು ತಿಂಗಳಿಗೆ ಬೆಲೆ ಏರೀಯೇರಿ‌ ಪಟ್ಟಣದ ಹೋಟೆಲುಗಳಲ್ಲಾದರೆ ಈಗ ಒಂದು ಇಡ್ಲಿಗೆ ಹದಿನೈದು ರೂಪಾಯಿ. ಆದರೆ ಈ ಇಡ್ಲಿ ಅಜ್ಜಿ
ಹೋಟೆಲಲ್ಲಿ ಎಷ್ಟಿರಬಹುದು ಊಹಿಸಿ. ಐದು ರೂ,ಎಂಟು ರೂ..!?
ನಿಮ್ಮೆಣಿಕೆ ಸರಿಯಿಲ್ಲ ಎಂದರೆ ಅಚ್ಚರಿಪಡುವಿರಿ. ಈಗ ಅಲ್ಲಿ‌ ಒಂದು ಇಡ್ಲಿಗೆ ಒಂದೇ ರೂಪಾಯಿ!.
ಮೂವತ್ತು ವರ್ಷದಲ್ಲಿ ಪೇಟೆ ಧಾರಣೆ ಎಷ್ಟು ಏರಿರಬಹುದು ಲೆಕ್ಕಾಚಾರ ಮಾಡಿ ನೋಡಿ.

ಹತ್ತಿರದ ಹಳ್ಳಿಗಳಿಂದ ಅಂದರೆ ಎರಡು ಕಿಮೀ ದೂರದಿಂದ ಅಲ್ಲಿಗೆ ಬಂದು ಅಜ್ಜಿಯ ಕೈ ಇಡ್ಲಿ ತಿನ್ನುವ ಅಭ್ಯಾಸವಾಗಿಬಿಟ್ಟಿದೆ.
ಅಜ್ಜಿ ಇಡ್ಲಿ ಬಹಳ ಸೋವಿ ಅಂತ ತಿಳಿದು ಕಾರ್ಮಿಕರು, ದಿನಗೂಲಿಗಳು
ಅಲ್ಲಿ ಮುತ್ತಿರುತ್ತಾರೆ.ಏನಿಲ್ಲಾ ಅಂದರೂ ಅಜ್ಜಿ ದಿನಕ್ಕೆ ಒಂದು ಸಾವಿರ ಇಡ್ಲಿ ಬೇಯಿಸುತ್ತಾರೆ. ಸಾಂಬಾರ್ ,ಚಟ್ನಿ ಸೇರಿ ಒಂದುರೂಗೆ ಒಂದು ಇಡ್ಲಿ!
ಸೌದೆ ಒಲೆ, ಹಳೇಪಾತ್ರೆಗಳು,ಇಕ್ಕಟ್ಟು
ಜಾಗ ,ಸರಿಯಾದ ಚಾವಣಿಯಿಲ್ಲ.
ಕೋವಿಡ್ ಲಾಕ್ ಡೌನ್ ನಲ್ಲೂ ಇಡ್ಲಿ
ನಾಟೌಟ್ ಸಪ್ಲೆ.


ಆ ಅಜ್ಜಿಯ ಹೆಸರು ಕಮಲಾಥಲ್.
ಸ್ಥಳ ತಮಿಳುನಾಡಿನ ತೊಂಡಮುತೂರ್.
ಇದನ್ನೆಲ್ಲಾ ಒಮ್ಮೆ ಟ್ವಿಟರ್ ನಲ್ಲಿ ಉದ್ಯಮಿ ಆನಂದ್ ಮಹೀಂದ್ರ
2019 ರಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದರು. ಅದು ವೈರಲ್ಲಾಗಿ ಇಡ್ಲಿ ಅಜ್ಜಿಯ ಸಾಮಾಜಿಕ ಸೇವೆ, ಬದ್ಧತೆಯನ್ನ ಎಲ್ಲರೂ ಮೆಚ್ಚುವಂತೆ ಮಾಡಿತು.ನೆರವಿನ ಹಸ್ತ ನೀಡಲು ಹಲವರು ಮುಂದೆ ಬಂದರು. 2022 ರ ವಿಶ್ವ ಅಮ್ಮಂದಿರ ದಿನ, ಆನಂದ್ ಮಹೀಂದ್ರ ಅವರು ಅಜ್ಜಿಗೆ ಮನೆ ಮತ್ತು ಇಡ್ಲಿ ಬೇಯಿಸಲು ಸಾಧ್ಯವಾದ ಸಜ್ಜಾದ ಸ್ಥಳಾವಕಾಶವನ್ನ ನೂತನವಾಗಿ ನಿರ್ಮಿಸಿ ಕೊಡುಗೆ ನೀಡಿದ್ದಾರೆ.

ನಮ್ಮ ಜನ್ ಎಂಥವರೂ ಅಂದರೆ ಇಡ್ಲಿಗೆ ಬೆಲೆ ಅಷ್ಟು ಸೋವಿ ಇದ್ದರೂ
ಹತ್ತು ಇಡ್ಲಿ ಗುಳುಂ ಮಾಡಿ ಐದುರೂಪಾಯಿ ನೀಡುವ ರುಸ್ತುಮರು ಈಗಲೂ ಇದ್ದಾರೆ.
ಜನ ತಿಂದು ಹೋಗಲಿ ಬಿಡಿ ಎಂದು
ಇಡ್ಲಿ ಅಜ್ಜಿ ಬೊಚ್ಚುಬಾಯಿ ಬಿಟ್ಟು ನಗುತ್ತಾರೆ.!
ಏನೇ ಆಗಲಿ ಮಾನವೀಯ ಅನುಕಂಪ ತೋರಿದ ಉದ್ಯಮಿ
ಆನಂದ್ ಮಹೀಂದ್ರ ಅವರಿಗೆ
ನಾವು ಬೆನ್ನುತಟ್ಟಬಹುದು ಅಲ್ಲವೆ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Backward Classes Welfare Department ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

Backward Classes Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ...

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ...

Klive Special Article "ದಧಾನಾಂ ಕರಪದ್ಮಾಭ್ಯಾಂಅಕ್ಷಮಾಲಾ ಕಮಂಡಲೂ/ದೇವಿ ಪ್ರಸೀದತು ಮಯಿಬ್ರಹ್ಮಚಾರಿಣ್ಯನುತ್ತಮಾ//ಮೊದಲನೆಯ ದಿನ...

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...