Monday, December 8, 2025
Monday, December 8, 2025

ಕೃಷಿ ಸಮಸ್ಯೆಗೆ ಕ್ಷೇತ್ರದಲ್ಲಿಯೇ ಪರಿಹರಿಸುವ ಯತ್ನ ರೈತರೊಂದಿಗೊಂದು ದಿನ

Date:

ಯುವಜನರು ಕೃಷಿಯನ್ನು ಲಾಭದಾಯಕವಲ್ಲವೆಂದು ಪರಿಗಣಿಸಿ ನಗರ ಪಟ್ಟಣಗಳತ್ತ ಮುಖ ಮಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ಪುನಃ ಯುವ ಜನರನ್ನು ಗ್ರಾಮಗಳತ್ತ, ಕೃಷಿಯತ್ತ ವಾಪಸ್ ಕರೆತರುವ ಉದ್ದೇಶದಿಂದ ‘ರೈತರೊಂದಿಗೆ ಒಂದು ದಿನ ಎಂಬ ವಿಶಿಷ್ಟ’ ಕಾರ್ಯಕ್ರಮವನ್ನು ಜಾರಿ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ರೈತರೊಂದಿಗೆ ಒಂದು ದಿನ’ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಯನ್ನು ಕಡೆಗಣಿಸುವ ಕಾಲ ಇದಾಗಿದ್ದು, ರೈತರು ಯುವಜನರಲ್ಲಿ ಆತ್ಮಸ್ಥೈರ್ಯ ತುಂಬಲು ಕೃಷಿ ಇಲಾಖೆ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದರು.

ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಮೂಲಕ ವಿದ್ಯಾರ್ಥಿ ವೇತನ, ರೈತರ ಟ್ರಾಕ್ಟರ್ ಡೀಸೆಲ್ ಗೆ ಸಬ್ಸಿಡಿ, ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆ ಮತ್ತಿತರ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ಪ್ರಧಾನ ಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ಫಲಾನುಭವಿ ರೈತರ ಖಾತೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು 10 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದರು.

‘ರೈತರೊಂದಿಗೆ ಒಂದು ದಿನ ಎಂಬ ವಿಶಿಷ್ಟ’ ಕಾರ್ಯಕ್ರಮವನ್ನು 2020 ರ ನವೆಂಬರ್ ಮಾಹೆಯಿಂದ ಜಾರಿಗೆ ತಂದಿದ್ದು ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರೈಸಿ 15ನೇ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ರೈತರೊಂದಿಗೆ ಒಂದು ದಿನ ಬೆರೆತು ಸಮಸ್ಯೆಗಳನ್ನು ಕ್ಷೇತ್ರ ಮಟ್ಟದಲ್ಲಿಯೇ ಆಲಿಸಿ ಸಾಧ್ಯವಾದಷ್ಟು ಅಲ್ಲಿಯೇ ಪರಿಹರಿಸಿ ಸ್ಥಳದಲ್ಲೆ ವಿವಿಧ ಸೌಲಭ್ಯಗಳನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು .

ರಾಜ್ಯದ ಸುಮಾರು 59 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಟ್ರಾಕ್ಟರ್ ಗಳಿಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ತುಂತುರು ಮತ್ತು ಹನಿ ನೀರಾವರಿಗೆ ಗರಿಷ್ಠ ಸಬ್ಸಿಡಿಯನ್ನು ನೀಡುತ್ತಿದ್ದು, ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಕೃಷಿಯತ್ತ ಯುವಜನರನ್ನು ಪುನಃ ಕರೆತರಲು ಮತ್ತು ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಕೃಷಿ ಇಲಾಖೆ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೃಷಿ ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದರು.

ಜೊತೆಗೆ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಕಾಲೇಜುಗಳಲ್ಲಿ ಕಳೆದ ವರ್ಷ ಇದ್ದ ರೈತರ ಮಕ್ಕಳ ಮೀಸಲಾತಿಯನ್ನು ಶೇ.40 ರಿಂದ ಶೇ.50 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಿಂದಾಗಿ 186 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಗಳು ದೊರೆತು ರೈತರ ಮಕ್ಕಳಿಗೆ ಅನುಕೂಲವಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಮಕ್ಕಳ ಸಾಂಸ್ಕೃತಿಕ ಪ್ರದರ್ಶನ ಮೆಚ್ಚಿದ ಸಂಸದ ರಾಘವೇಂದ್ರ

B. Y. Raghavendra ಭದ್ರಾವತಿಯ ನ್ಯೂ ಟೌನ್‌ನಲ್ಲಿರುವ ಶ್ರೀ ಸತ್ಯ ಸಾಯಿ...

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...