Thursday, February 5, 2026
Thursday, February 5, 2026

ಮರಿಯುಪೋಲ್ ವಶಪಡಿಸಿಕೊಂಡಿದ್ದೇವೆ-ರಷ್ಯನ್ ವಕ್ತಾರ

Date:

ಉಕ್ರೇನ್‌ನ ಮರಿಯುಪೋಲ್‌ ನಗರ ಪ್ರದೇಶವನ್ನು ಉಕ್ರೇನ್ ಸೇನಾ ಪಡೆಗಳು ಮತ್ತು ವಿದೇಶಿ ಸೇನಾ ಸಿಬ್ಬಂದಿಯಿಂದ ಸಂಪೂರ್ಣವಾಗಿ ವಶಕ್ಕೆ ಪಡೆದಿರುವುದಾಗಿ ರಷ್ಯಾದ ಮಿಲಿಟರಿ ತಿಳಿಸಿದೆ.

ಅಜೋವ್ಸ್ಟಾಲ್ ಕಬ್ಬಿಣ ಮತ್ತು ಸ್ಟೀಲ್ ವರ್ಕ್ಸ್ ಪ್ಲಾಂಟ್‌ನಲ್ಲಿನ ಉಕ್ರೇನ್ ಸೇನಾಪಡೆಗಳ ವಸ್ತುಗಳನ್ನು ನಿರ್ಬಂಧಿಸಲಾಗಿದೆ.

ನಗರದ ಮೇಲೆ ದಾಳಿ ನಡೆಸುವ ವೇಳೆ 1,464 ಉಕ್ರೇನ್ ಯೋಧರು ಶರಣಾಗಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಅವರು ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.

ರಷ್ಯಾ ,ಉಕ್ರೇನ್ ಸಂಘರ್ಷದಲ್ಲಿ ಅಜೋವ್ ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಮರಿಯುಪೋಲ್‌ ಅತ್ಯಂತ ಕೆಟ್ಟ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಕ್ಸಿನ್ಹುಹಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಗರವನ್ನು ಮುತ್ತಿಗೆ ಹಾಕಿದ ಸುಮಾರು ಏಳು ವಾರಗಳ ನಂತರವೂ ತನ್ನ ಪಡೆಗಳು ಮಾರಿಯುಪೋಲ್‌ನಲ್ಲಿ ರಷ್ಯಾ ಪಡೆಗಳ ವಿರುದ್ಧ ಹೋರಾಡುತ್ತಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಮರಿಯುಪೋಲ್‌ನಲ್ಲಿ ಉಕ್ರೇನ್ ಸೇನೆಯನ್ನು ನಿರ್ಮೂಲನೆ ಮಾಡುವುದರಿಂದ ರಷ್ಯಾದೊಂದಿಗಿನ ಯಾವುದೇ ಮಾತುಕತೆಯು ಕೊನೆಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಏಳು ವಾರಗಳ ಯುದ್ಧದಲ್ಲಿ ಸುಮಾರು 2,500ರಿಂದ 3,000 ಉಕ್ರೇನ್‌ ಸೈನಿಕರು ಹುತಾತ್ಮರಾಗಿದ್ದಾರೆ. ಸುಮಾರು 10 ಸಾವಿರ ಯೋಧರು ಗಾಯಗೊಂಡಿದ್ದಾರೆ. ಹಾಗೆಯೇ ನಮ್ಮ ಸೇನೆ, ರಷ್ಯಾದ ಸುಮಾರು 20 ಸಾವಿರ ಆಕ್ರಮಣಕಾರರನ್ನು ಕೊಂದಿದೆ ಎಂದೂ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...