ಉಕ್ರೇನ್ ಯುದ್ಧದ ಹಿನ್ನಡೆಗಳಿಂದ ಹತಾಶಗೊಂಡಿರುವ ಪುಟಿನ್ ಒಡ್ಡುತ್ತಾ ಇರುವ ಪರಮಾಣು ಬೆದರಿಕೆಗಳನ್ನು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದು ಅಮೆರಿಕದ CIA ಡೈರೆಕ್ಟರ್ ವಿಲಿಯಮ್ ಬರ್ನ್ಸ್ ಅವರು ಹೇಳಿದ್ದಾರೆ.
ಅಟ್ಲಾಂಟದಲ್ಲಿ ಈ ಕುರಿತು ಮಾತನಾಡಿರುವ ಅವರು ಇದುವರೆಗೂ ರಷ್ಯಾ ಸೇನೆ ಅನುಭವಿಸುತ್ತಿರುವ ಹಿನ್ನಡೆಗಳಿಂದ ಪುಟಿನ್ ಮತ್ತು ರಷ್ಯಾದ ನಾಯಕತ್ವ ಹತಾಶೆಗೊಂಡಿದೆ.
ಇದನ್ನು ನೋಡುತ್ತಿದ್ದರೆ ಅವರು ಒಡ್ಡುತ್ತಾ ಇರುವ ಪರಮಾಣು ಆಯುಧ ಬಳಕೆಯ ಬೆದರಿಕೆಗಳನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ಹಾಗಿಲ್ಲ ಎಂದಿದ್ದಾರೆ.
ಇದರೊಂದಿಗೆ ರಷ್ಯಾ ಪರಮಾಣು ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದಂತೆ, ಎಸ್ಕಲೇಟ್ ಟು ಡಿಎಸ್ಕಲೇಟ್’ ತತ್ವ ಪಾಲಿಸುತ್ತಿದೆ. ರಷ್ಯಾದ ಭದ್ರತೆಗೆ ಅಪಾಯ ಎದುರಾದಾಗ ರಷ್ಯಾ ಎಷ್ಟೇ ಚಿಕ್ಕ ಯುದ್ಧ ಅಥವಾ ಸಂಘರ್ಷ ಎಂದು ನೋಡದೆ ತಾನೇ ಮೊದಲು ಪರಮಾಣು ಅಸ್ತ್ರವನ್ನು ಬಳಸಬಹುದು.
ರಷ್ಯಾ ಈ ರೀತಿ ನಡೆದುಕೊಂಡರೆ ನ್ಯಾಟೋ ಉಕ್ರೇನ್ ಯುದ್ಧದಲ್ಲಿ ಭಾಗಿಯಾಗ ಬೇಕಾಗುತ್ತದೆ . ಮುಂದೆ ಅದು ಮೂರನೇ ವಿಶ್ವಯುದ್ಧ ಆಗುವ ಕಳವಳ ಕಳವಳ ಅಧ್ಯಕ್ಷ ಬೈಡನ್‌ಗೆ ಇರುವುದು ನನಗೆ ಅರ್ಥವಾಗಿದೆ ಎಂದಿದ್ದಾರೆ.