Thursday, October 3, 2024
Thursday, October 3, 2024

ಕನ್ನಡ ಭಾಷೆಯನ್ನು ಎಲ್ಲರೂ ಗೌರವಿಸಬೇಕು-ಡಾ.ನಾ. ಡಿಸೋಜ

Date:

ಶಿವಮೊಗ್ಗ ಪೌರಾಣಿಕ ಐತಿಹಾಸಿಕವಾಗಿ ಪ್ರಸಿದ್ಧಿಯನ್ನು ಗಳಿಸಿದೆ.
ಕಲೆ-ಸಾಹಿತ್ಯ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೂಡ ದೇಶದಲ್ಲೆಲ್ಲಾ ಗಮನಸೆಳೆದ ಜಿಲ್ಲೆ ಇದಾಗಿದೆ.

ಸಾಹಿತ್ಯದ ಹಬ್ಬವೆಂದರೆ ಇಲ್ಲಿ ಸಾಮಾನ್ಯವೇ… ಇಲ್ಲಿ, ಹಲವಾರು ಉಪನ್ಯಾಸಗಳು, ಕವಿಗೋಷ್ಠಿಗಳು, ಹಾಗೂ ಸಾಹಿತ್ಯ ಸಮ್ಮೇಳನಗಳು ಜರುಗುತ್ತಲೇ ಇರುತ್ತವೆ.

ಈ ಬಾರಿಯ ವಿಶೇಷವೆಂದರೆ,
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ 1915ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿವಮೊಗ್ಗದ ಸಾಹಿತ್ಯ ಗ್ರಾಮ ಚಾಲುಕ್ಯ ನಗರ, ಗೋಪಿಶೆಟ್ಟಿಕೊಪ್ಪ ದಲ್ಲಿ ಹಮ್ಮಿಕೊಳ್ಳಲಾಯಿತು.

ಮಾರ್ಚ್ 30, ಸಮ್ಮೇಳನದ ಉದ್ಘಾಟನೆ ನಡೆಯಿತು. ಮಾರ್ಚ್ 31ರಂದು ಸಂಜೆ ಸಮಾರೋಪ ಸಮಾರಂಭ ನೆರವೇರಿತು.

ವಿವಿಧ ಜಾನಪದ ಕಲಾ ತಂಡಗಳಿಂದ ರಾಜ ಬೀದಿಗಳಲ್ಲಿ ಹಬ್ಬದ ಸಡಗರವಿತ್ತು.

ಪ್ರಮುಖವಾಗಿ ಡೊಳ್ಳುಕುಣಿತ ಈ ಮೆರವಣಿಗೆಯಲ್ಲಿ ಕೇಂದ್ರಬಿಂದುವಾಗಿತ್ತು.

ಸಮ್ಮೇಳನದ ಅಧ್ಯಕ್ಷರಿಂದ ಗೋಪಾಲ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ವಿತರಿಸುವ ಮೂಲಕ ಮೆರವಣಿಗೆ ಆರಂಭಗೊಂಡಿತು.

ಮೆರವಣಿಗೆಯು ಶಾಂತವೇರಿ ಗೋಪಾಲಗೌಡ ಮಹಾದ್ವಾರದ ಮೂಲಕ ಡಾ.ಜಿ.ಎಸ್. ಶಿವರುದ್ರಪ್ಪ ಸಾಹಿತ್ಯ ಸಭಾಂಗಣದೊಳಗೆ ಪ್ರವೇಶಿಸಿತು.

ಸಭಾಂಗಣದ ಹೊರವಲಯದಲ್ಲಿ ವಿವಿಧ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಪುಸ್ತಕಗಳಲ್ಲದೆ ದೇಶಿಯ ಉತ್ಪನ್ನಗಳು, ಹಾಗೂ ಖಾದಿ ಬಟ್ಟೆಗಳ ಅಂಗಡಿಗಳು ಸಹ ಇಲ್ಲಿ ನೆರೆದಿದ್ದವು.

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ ಡಾ. ಗುಂಡಾಜೋಯಿಸರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಎರಡು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೊದಲ ದಿನ ಹಾಲು ಹಳ್ಳ ಹರಿಯಲಿ ಕವಿಗಳ ಸಮಯ ಗೋಷ್ಠಿ, ಸಮ್ಮೇಳನದ ಅಧ್ಯಕ್ಷರ ಬದುಕು-ಬರಹ ,ಡಾ. ಕೆಳದಿ ಗುಂಡಾಜೋಯಿಸ್ ಅವರ ಸಾಹಿತ್ಯ ಕೃತಿಗಳ ಅವಲೋಕನ, ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಕೆಳದಿ ಗುಂಡಾಜೋಯಿಸ್ ಅವರ ಕೊಡುಗೆಗಳ ಗೋಷ್ಠಿ, ಸಂಜೆ 6 ಗಂಟೆಯ ಹೊತ್ತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಮತ್ತು ಚಿನ್ನದ ಮುಂದಿನ ಅಂಶಗಳ ಕುರಿತು ಗೋಷ್ಠಿ ನೆರವೇರಿತು.

ಮಾರ್ಚ್ 31ರಂದು, ಹೊಸ ಓದು ಹೊಸದನಿ, ವಿಶೇಷ ಉಪನ್ಯಾಸ, ಜೇನು ಮಳೆಯು ಸುರಿಯಲಿ , ಪುಸ್ತಕ ಅವಲೋಕನ ಗೋಷ್ಠಿಗಳು ನೆರವೇರಿದವು.
ಜನಪದ ವಾಗ್ಮಿ, ಲಘು ವಿಷಯಗಳನ್ನು ಜನರಿಗೆ ಮುಟ್ಟಿಸುವಂತಹ ಮಾತುಗಾರರಾದ ಪ್ರೋ. ಕೃಷ್ಣೇಗೌಡರ ಕನ್ನಡ ಪ್ರೀತಿಯ ಕುರಿತು ಮಾತನಾಡಿದರು.

ಸಾಹಿತ್ಯ ಸಮ್ಮೇಳನದ ಎರಡನೆಯ ದಿನ ಎಲ್ಲ ಕನ್ನಡ ಮನಸ್ಸುಗಳು ಸೇರಿ ಭಾರತ್ ಸೇವಾದಳದ ಜಿಲ್ಲಾ ಸಂಘಟಕರಾದ ಸೂರಜ್ ಅವರ ನೇತೃತ್ವದಲ್ಲಿ ಧ್ವಜಾವರೋಹಣ ಕಾರ್ಯಕ್ರಮ ನೆರವೇರಿತು.
ಕೆಳದಿ ಗುಂಡಾಜೋಯಿಸ್, ಹಾಗೂ ಹಾಗೂ ಕನ್ನಡದ ಖ್ಯಾತ ಕವಿಗಳಾದ ನಾ. ಡಿಸೋಜಾ ಅವರು ಧ್ವಜಾವರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ವೇದಿಕೆ ಕಾರ್ಯಕ್ರಮ ಆರಂಭಗೊಂಡ ನಂತರ ಕಾರ್ಯಕ್ರಮದಲ್ಲಿ ನೆರೆದಿರುವ ಹಲವಾರು ಕನ್ನಡ ಪ್ರೇಮಿಗಳು ಗಾನಸುಧೆ ಹರಿಸಿದರು.
ನಂತರ ಜನಪದ ಗೀತೆ, ಭಾವಗೀತೆಗಳ ಗೀತ ಗಾಯನ ನಡೆಯಿತು.
ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಆಹ್ವಾನಿತರು, ಹಾಗೂ ಹಿರಿಯ ಸಾಹಿತಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನುದ್ದೇಶಿಸಿ, ಮಡಿಕೇರಿಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ನಾ. ಡಿಸೋಜಾರವರು ಸಮಾರೋಪ ನುಡಿಗಳನ್ನಾಡುತ್ತಾ, 92 ವರ್ಷದ ಯುವಕ ಅಂದರೆ ಕೆಳದಿ ಗುಂಡಾ ಜೋಯಿಸ್ ಅವರು ಇಲ್ಲಿ ಬಂದು ಮಾತನಾಡಿದ ಮೇಲೆ. ನಾನು 82 ಅಲ್ಲೇ ಕೂತು ಮಾತನಾಡುವುದು ಸೂಕ್ತವಲ್ಲ ಎನಿಸಿತು. ಅವರಿಗೂ ನನಗೂ ಅವಿನಾಭಾವ ಸಂಬಂಧ. ಈ ಕಾರ್ಯಕ್ರಮಕ್ಕೆ ಬಂದು ಬಹಳ ಸಂತೋಷವಾಯಿತು. ಇಡೀ ನಾಡಿನ ಕೆಳದಿಯ ಇತಿಹಾಸವನ್ನು ಪರಿಚಯಿಸಿದವರು ಕೆಳದಿ ಗುಂಡಾಜೋಯಿಸ್. ಇವರೊಂದಿಗೆ ಈ ಸಮಾರಂಭದಲ್ಲಿ ಭಾಗಿಯಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಕನ್ನಡ ಭಾಷೆಯನ್ನು ಎಲ್ಲರೂ ಗೌರವಿಸಬೇಕು. ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ನಮ್ಮ ಹೊಣೆ ಎಂದರು.

ನಂತರ ಸಾಗರದ ಸಂಶೋಧಕರು, ಹಿರಿಯ ಸಾಹಿತಿಗಳು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಡಾ‌. ಕೆ.ಎಸ್. ಗುಂಡಾ ಜೋಯಿಸ್ ರವರು ಮಾತನಾಡುತ್ತಾ, ಅನ್ಯ ಭಾಷೆಗಳ ಅತಿಕ್ರಮಣವನ್ನು ಕಡಿಮೆ ಮಾಡಲು ಕನ್ನಡ ಭಾಷೆಯಲ್ಲೇ ವ್ಯವರಿಸಬೇಕು. ಮಕ್ಕಳಿಗೆ ಮೊದಲು ಕನ್ನಡ ಶಿಕ್ಷಣವನ್ನು ನೀಡಬೇಕು ಎಂದರು.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ್ ರವರು ಅಧ್ಯಕ್ಷ ನುಡಿಗಳನ್ನಾಡಿದರು.

ಈ ಮೂಲಕ ಶಿವಮೊಗ್ಗದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...