Thursday, August 13, 2026
Thursday, August 13, 2026

ಭಾರತೀಯ ರೈಲ್ವೆಯ ಅತ್ಯಂತ ಉದ್ದದ ಸುರಂಗಮಾರ್ಗ

Date:

ಉತ್ತರ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದ ಕಾತ್ರಾ-ಬನಿಹಾಲ್ ನಿಲ್ದಾಣಗಳಲ್ಲೂ ಜೋಡಿಸುವ ಪ್ರಮುಖ ಸುರಂಗಮಾರ್ಗದ ಕಾಮಗಾರಿಯನ್ನು ಮುಕ್ತಾಯಗೊಳಿಸಿದೆ. ಉಧಮ್ ಪುರ , ಶ್ರೀನಗರ, ಬಾರಮುಲ್ಲಾ, ರೈಲ್ವೆ ಸಂಪರ್ಕ ಯೋಜನೆಯ ಮುಕ್ತಾಯಗೊಂಡ ಬಳಿಕ ಈ ಸುರಂಗಕ್ಕೆ ಭಾರತೀಯ ರೈಲ್ವೆಯ ಅತಿ ಉದ್ದದ ಸುರಂಗ ಎಂಬ ಮಾನ್ಯತೆ ಲಭಿಸಲಿದೆ.

ಈ ಸುರಂಗವು 12.75 ಕಿ.ಮೀ. ಉದ್ದವಿದೆ. ಬನಿಹಾಲ್ -ಕಾಜಿಗುಂಡ್ ನಡುವಿನ 11.20 ಕಿ.ಮೀ‌ ಉದ್ದದ ಸುರಂಗವು ಈವರೆಗಿನ ಅತಿ ಉದ್ದದ ಸುರಂಗವಾಗಿದೆ. ಉಧಮ್ ಪುರ- ಶ್ರೀನಗರ,-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಲ್ಲಿ 272 ಕಿ.ಮೀ‌. ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಆ ಪೈಕಿ ಕಾತ್ರ ಬನಿಹಲ್ ಸುರಂಗ ಮಾರ್ಗ ಸೇರಿದಂತೆ 111 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.

ಕಾಮಗಾರಿ ಮುಕ್ತಾಯವಾಗಿರುವ 161 ಕಿ.ಮೀ. ರೈಲು ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭ ವಾಗಿದೆ.
ಈ ಸುರಂಗ ಮಾರ್ಗ ನಿರ್ಮಾಣ ಸವಾಲಿನಿಂದ ಕೂಡಿತ್ತು. ಅನಿರೀಕ್ಷಿತವಾಗಿ ಕಂಡುಬಂದ ಜಲಮೂಲಗಳು, ಬಂಡೆಗಳ ಜಂತಿ ರಚನೆ ಮೊದಲಿದ್ದ ಭೌಗೋಳಿಕ ಪರಿಸ್ಥಿತಿಗಳು ಇಂಜಿನಿಯರ್ ಗಳ ತಾಂತ್ರಿಕ ಕೌಶಲ್ಯಕ್ಕೆ ಸವಾಲು ಒಡ್ಡಿದ್ದವು. ಅದನ್ನು ಎದುರಿಸಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...