ಕೋರ್ಟ್ ಆದೇಶದಂತೆ ರೈತನಿಗೆ ಪರಿಹಾರ ನೀಡದ ಕಾರಣ ಕಲಬುರ್ಗಿಯ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡುವಂತೆ ಇಲ್ಲಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. ತಕ್ಷಣವೇ ಕೋರ್ಟ್ ಸಿಬ್ಬಂದಿಯೊಂದಿಗೆ ಬಂದ ವಕೀಲರು, ಜಿಲ್ಲಾಧಿಕಾರಿಯನ್ನು ಜಪ್ತಿ ಮಾಡಲು ಪ್ರಯತ್ನ ನಡೆಸಿದ್ದಾರೆ.
ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಸ್ವಲ್ಪ ಸಮಯದ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಜಿಲ್ಲಾಡಳಿತವು ಪ್ರಕರಣವೂ ನೇರವಾಗಿ ತಮಗೆ ಸಂಬಂಧಿಸಿದ್ದಲ್ಲ ಎಂದು ಕೋರ್ಟ್ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟಿತ್ತು.
ಕಲ್ಬುರ್ಗಿಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಲ್ಲಪ್ಪ ಮೇತ್ರೆ ಎಂಬ ರೈತನ ಹೊಲವು ಭೀಮಾ ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಿತ್ತು. ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ ಜಿಲ್ಲಾಡಳಿತವು ವಿಳಂಬ ಮಾಡಿತ್ತು. ಆದ್ದರಿಂದ ಆರೈಕೆ ಮತ್ತೆ ಕೋರ್ಟಿಗೆ ಮೊರೆ ಹೋಗಿದ್ದ. ರೈತನ ಅಳಲು ಆಲಿಸಿದ್ದ ನ್ಯಾಯಾಲಯವು ಜಿಲ್ಲಾಧಿಕಾರಿಯ ಕಾರು ಜಪ್ತಿಗೆ ಆದೇಶ ಹೊರಡಿಸಿತ್ತು.
2008ರಲ್ಲಿ ರೈತ ಕಲ್ಲಪ್ಪ ಮೈತ್ರಿಯ ಅವರ 33 ಗುಂಟೆ ಜಮೀನು ಭೀಮ ಏತ ನೀರಾವರಿ ಯೋಜನೆ ಅಡಿ ಮುಳುಗಡೆಯಾಗಿತ್ತು. ಮುಳುಗಡೆಯಾದ ಜಮೀನಿಗೆ 7.39 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಮಾಡಿದ್ದರೂ ಸಹ ಅಧಿಕಾರಿಗಳು ಪಾಲನೆ ಮಾಡಿರಲಿಲ್ಲ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp
Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.