Saturday, October 5, 2024
Saturday, October 5, 2024

ಕನ್ನಡದ ಕಬೀರ ಇಬ್ರಾಹಿಂ ಸುತಾರ ಇನ್ನಿಲ್ಲ

Date:

ಇಬ್ರಾಹಿಂ ಎನ್. ಸುತಾರ ಅವರು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಮೇ 10,1940ರಲ್ಲಿ ಜನಿಸಿದರು. ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ 2018ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
1995ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯೂ ಇವರಿಗೆ ಸಂದಿದೆ.

ಇವರ ತಂದೆ ನಬೀಸಾಬ್ ಮತ್ತು ತಾಯಿ ಅಮೀನಾಬಿ‌.
ಬಡತನದಿಂದಾಗಿ ಇವರು ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು.

ಬಾಲ್ಯದಲ್ಲಿ ಇವರು ನಮಾಜ್ ಮತ್ತು ಕುರಾನ್ ಕಲಿತರು.
ನಂತರ ವಿವಿಧ ಧರ್ಮಗಳ ಬಗ್ಗೆ ತಿಳಿಯುವ ಆಸಕ್ತಿಯಿಂದ ಭಜನಾ ಸಂಘ ದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಮೂಲಕ ವಿವಿಧ ಧರ್ಮಗಳ ಕುರಿತು ಅಪಾರ ಜ್ಞಾನವನ್ನು ಪಡೆದರು. ಭಗವದ್ಗೀತೆಯ ವಿವಿಧ ಶ್ಲೋಕಗಳನ್ನು ಸರಾಗವಾಗಿ ಉಚ್ಛರಿಸುವ ಚಾಕಚಕ್ಯತೆಯನ್ನು ಸಹ ಪಡೆದರು.

ಉಪನಿಷತ್ತಿನ ಸಾರ ಅರಿತುಕೊಂಡ ಇವರು ರಂಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡರು. ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಒಂದು ತಿಂಗಳು ಕಾಲ ಬೆಳಿಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. ‘ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನಲ್ಲಿನ ತಿಳಿವಳಿಕೆ ವಿಸ್ತರಿಸಲು ನೆರವಾಯಿತು’ ಎಂದು ಸುತಾರ ಸ್ಮರಿಸಿಕೊಳ್ಳುತ್ತಿದ್ದರು.

ಹಿಂದೂ ಮುಸ್ಲಿಂ ಭಾವೈಕ್ಯತೆ ಶ್ರೇಷ್ಠ ಪ್ರವಚನ, ಸೂಫಿ ಸಂತರಾಗಿದ್ದ ಸುತಾರ್ ಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಇಬ್ರಾಹಿಂ ಸುತಾರ ಅವರ ಮಾತುಗಳು ಮತ್ತು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ವೈರಲ್ ಆಗಿವೆ.

ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. ‘ನಾವೆಲ್ಲಾ ಭಾರತೀಯರು’ ಎಂಬುದು ಅವರ ಕವನ ಸಂಕಲನವಾಗಿ ಹೊರಹೊಮ್ಮಿದೆ.
ಇವರು ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ.
ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಂಬನಿ ಮಿಡಿದಿದ್ದಾರೆ.

ಇಂತಹ ಹಿರಿಯ ಜ್ಞಾನಿ ಇಂದು ನಮ್ಮೊಂದಿಗಿಲ್ಲ .ಆದರೆ, ಅವರ ಆದರ್ಶ ಮತ್ತು ಚಿಂತನೆಗಳು ಸರ್ವ ಧರ್ಮ ಸಮಾನತೆಯನ್ನು ಸಾರುವಲ್ಲಿ ಎಂದೆಂದಿಗೂ ಹಚ್ಚ ಹಸುರಾಗಿರುತ್ತವೆ. ಇಂತಹ ನೂರಾರು ಇಬ್ರಾಹಿಂ ಸುತಾರ ಅವರು ಹುಟ್ಟಿ ಬರಲಿ ಎಂದು ಆಶಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...