Friday, April 3, 2026
Friday, April 3, 2026

ಆಮದು ಕಾಳುಮೆಣಸಿನಿಂದ ದೇಶೀಯ ಕೃಷಿಕರಿಗೆ ನಷ್ಟ

Date:

ನಾಲ್ಕು ತಿಂಗಳ ಹಿಂದೆ ದರ ಏರಿಕೆ ಕಂಡು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಕರಿಮೆಣಸು ಧಾರಣೆ ಮತ್ತೆ ಕುಸಿಯಲಾರಂಭಿಸಿದೆ.
ಹೊಸ ಬೆಳೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರ ಜೊತೆಯಲ್ಲಿ ವಿದೇಶದಿಂದ ಕಳಪೆ ಕರಿಮೆಣಸು ಅಕ್ರಮವಾಗಿ ಆಮದಾಗುತ್ತಿರುವ ಕಾರಣ ಧಾರಣೆಯಲ್ಲಿ ಅಸ್ಥಿರತೆಯ ಮೂಡಿ ಬಂದಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಕಾಳುಮೆಣಸಿನ ದರ ಕಿಲೋವೊಂದಕ್ಕೆ 350ರಿಂದ 380ರೂ.ವರೆಗೆ ಇತ್ತು. ನವೆಂಬರ್ ತಿಂಗಳಲ್ಲಿ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 530 ರೂ.ವರೆಗೂ ಧಾರಣೆ ಏರಿಕೆಯಾಗಿತ್ತು. ಬಳಿಕ ಒಂದಷ್ಟು ಕುಸಿತ ದಾಖಲಿಸಿ ಜನವರಿ ತಿಂಗಳಲ್ಲಿ 490ರೂ.ನಿಂದ 500 ರೂ. ಆಸುಪಾಸಿನಲ್ಲಿತ್ತು.
ಆದರೆ ಈಗ ಕರಿಮೆಣಸಿಗೆ 460 ರೂ. ದರದಲ್ಲಿ ಖರೀದಿ ಯಾಗುತ್ತಿದೆ.
ಸರಕಾರದ ಮಟ್ಟದಲ್ಲಿ ಕಳಪೆ ಮಾಲು ಆಮದಾಗುವುದನ್ನು ತಡೆಗಟ್ಟಲು ಸಾಧ್ಯವಾಗದೇ ಇರುವುದರಿಂದ ಕರಿಮೆಣಸು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ...

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ...

Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ

Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ...