ಅರುಣಾಚಲ ಪ್ರದೇಶ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಅಪಹರಿಸಿತ್ತು ಎನ್ನಲಾಗಿದ್ದ ಶ್ರೀರಾಮ್ ಮಿರಮ್ ತರೋನ್ ನನ್ನು ಚೀನಾ ಸೇನೆಯು, ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಭಾರತ, ಚೀನಾ ಸೇನೆಯ ಸಂವಹನ ಕೇಂದ್ರವಾಗಿರುವ ವಾಛಾ ದಮಾಯಿ ನಲ್ಲಿ ಗುರುವಾರ ಯುವಕನನ್ನು ಒಪ್ಪಿಸಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ.
ಸದ್ಯಕ್ಕೆ ಯುವಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಜನವರಿ 18ರಂದು ಯುವಕ ಕಣ್ಮರೆಯಾಗಿದ್ದ. ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಯಿಂದ ಯುವಕ ನಾಪತ್ತೆಯಾಗಿದ್ದ ಕಾರಣ, ಅಪಹರಣ ವಾಗಿರುವ ಅನುಮಾನ ಮೂಡಿತ್ತು. ಯುವಕನ ಜೊತೆಗಿದ್ದ ಆತನ ಸ್ನೇಹಿತ ಕೂಡ ಚೀನಾ ಸೈನಿಕರು ಕರೆದೊಯ್ದಿದ್ದಾರೆ ಎಂದು ಆತ ಹೇಳಿಕೆಯನ್ನು ನೀಡಿದ್ದಾನೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ರಕ್ಷಣಾ ಸಚಿವಾಲಯ ಸೇನಾಧಿಕಾರಿಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಧನ್ಯವಾದಗಳು ಎಂದು ರಿಜಿಜು ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.