Sunday, April 5, 2026
Sunday, April 5, 2026

ಪಾಕ್ ಬಂಧಿಸಿದ್ದ ಭಾರತೀಯ ಮೀನುಗಾರರ ಬಿಡುಗಡೆ

Date:

ಮೀನುಗಾರಿಕೆ ವೇಳೆ ಪಾಕಿಸ್ತಾನದ ಸಾಗರ ಪ್ರದೇಶ ಪ್ರವೇಶಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಭಾರತದ 20 ಮೀನುಗಾರರನ್ನು ಬಿಡುಗಡೆಗೊಳಿಸಿ, ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಕರಾಚಿಯ ಜೈಲಿನಲ್ಲಿದ್ದ 20 ಮೀನುಗಾರರನ್ನು ಭಾನುವಾರವೇ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.
ಸೋಮವಾರ ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಇನ್ನೂ 568 ಮೀನುಗಾರರು ಪಾಕಿಸ್ತಾನದ ಜೈಲಿನಲ್ಲಿ ಇದ್ದಾರೆಂದು ತಿಳಿದು ಬಂದಿದೆ. ಅವರ ಬಿಡುಗಡೆಗೂ ಕೇಂದ್ರ ಸರ್ಕಾರ ಕಸರತ್ತು ನಡೆಸುತ್ತಿದೆ.
ಮಾನವೀಯತೆ, ಸ್ನೇಹ ಸೌಹಾರ್ದದ ಹಿನ್ನೆಲೆಯಲ್ಲಿ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಈಧಿ ಫೌಂಡೇಷನ್ ಎಂಬ ಎನ್ ಜಿಒ, ಮೀನುಗಾರರಿಗೆ ತಲಾ ಐದು ಸಾವಿರ ರೂ. ಸಹಾಯಧನ ನೀಡಿದೆ. ಉಭಯ ದೇಶಗಳು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದ ಜೈಲಿನಲ್ಲಿ 51 ನಾಗರಿಕರು ಹಾಗೂ 577 ಮೀನುಗಾರರು ಸೇರಿ ಒಟ್ಟು 628 ಜನರಿದ್ದಾರೆ. ಹಾಗೆಯೇ ,ಭಾರತದ ಜೈಲಿನಲ್ಲಿ ಪಾಕ್ ನ 73 ನಾಗರಿಕರು ಹಾಗೂ 282 ಮೀನುಗಾರರು ಸೇರಿ ಒಟ್ಟು 355 ಜನ ಇದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರುದೀಪ- ಎಸ್.ಎನ್.ಚನ್ನಬಸಪ್ಪ.

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...