Saturday, May 23, 2026
Saturday, May 23, 2026

ಕಲ್ಯಾಣ ಕರ್ನಾಟಕ: ಅನುದಾನದ ಕೊರತೆ ಕಾಡುತ್ತಿದೆ

Date:

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಿರಂತರ ಆದ್ಯತೆ ಕೊಡುವುದಾಗಿ ಸರ್ಕಾರ ಪದೇಪದೇ ಹೇಳುತ್ತಿದೆ. ಆದರೆ ಅನುದಾನ ನೀಡಿಕೆ ಮತ್ತು ಬಳಕೆಗೆ ಕೊಡಬೇಕಾದ ಗಮನವನ್ನು ಕೊಡುತ್ತಿಲ್ಲ. ಇದು ಸರ್ಕಾರವು ಒದಗಿಸಿರುವ ಮಾಹಿತಿಯಿಂದ ಬಯಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರ ಕೇವಲ 415.16 ಕೋಟಿ ರೂಪಾಯಿ ಒದಗಿಸಿದ್ದು, ಕಳೆದ ವರ್ಷದ ಆರಂಭಿಕ ಶುಲ್ಕ ಸೇರಿ 620.65 ಕೋಟಿ ರೂಪಾಯಿ ಮಾತ್ರ ಬಳಕೆಯಾಗಿದೆ ಎನ್ನಲಾಗಿದೆ ‌.
ಕಲ್ಯಾಣ ಕರ್ನಾಟಕ ಪ್ರದೇಶಿಕಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ಹೊರತುಪಡಿಸಿ ಇನ್ನುಳಿದಂತೆ ಆಡಳಿತ ಮಂಡಳಿಗೆ ಯಾವುದೇ ಸದಸ್ಯರನ್ನು ನೇಮಿಸಿಲ್ಲ. ಈ ಭಾಗದ ಶಾಸಕರು, ಸಚಿವರು ಕೆಕೆಆರ್ ಡಿಬಿಗೆ ತಮ್ಮ ಭಾಗದ ಕಾಮಗಾರಿಗಳ ಪಟ್ಟಿ ಒದಗಿಸುವುದು, ಜಿಲ್ಲಾಡಳಿತ ಗಳ ಮೂಲಕ ಜಾರಿ ಸೇರಿದಂತೆ ಎಲ್ಲ ಹಂತದಲ್ಲಿಯೂ ವಿಳಂಬನೀತಿ ಅನುಸರಿಸುತ್ತಿರುವುದು ಸಮಸ್ಯೆಯ ಮೂಲ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂಪಾಯಿ ಒದಗಿಸುವುದಾಗಿ ಪ್ರಕಟಿಸಿದೆ. ಆದರೆ ನೀಡಿದ ಅನುದಾನ ಬಳಕೆಯಲ್ಲಿ ಆಡಳಿತದ ಮಂದಗತಿಯ ಕಾರ್ಯನಿರ್ವಹಣೆ ಹಾಗೂ ಶಾಸಕರು, ಸಚಿವರ ನಿರಾಸಕ್ತಿ ಮತ್ತು ಕೆಕೆಆರ್ ಡಿಬಿಗೆ ಪೂರ್ಣಪ್ರಮಾಣದ ಆಡಳಿತ ಮಂಡಳಿ ಇಲ್ಲದಿರುವುದು ಕಣ್ಣಿಗೆ ಕಟ್ಟಿದಂತಾಗಿದೆ.
ಮಂಡಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 1492.97 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿತ್ತು. ಆದರೆ, ಕಳೆದ ಎಂಟು ತಿಂಗಳಲ್ಲಿ ಕೇವಲ 415.16 ಕೋಟಿ ರೂ. ಮಾತ್ರ ಬಂದಿದೆ.
ಪ್ರಸ್ತುತ ಕಳೆದ ಎಂಟು ತಿಂಗಳಲ್ಲಿ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಿಡುಗಡೆಯಾದ 415.16 ಕೋಟಿ ರೂ. ಹಾಗೂ ಕಳೆದ ವರ್ಷ ಬಳಕೆಯಾಗದೇ ಉಳಿದಿದ್ದ ಅನುದಾನ ಸೇರಿದಂತೆ 620.65 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೆಕೆಆರ್ ಡಿಬಿಗೆ ಸರಕಾರ ಘೋಷಿಸಿದಂತೆ ಅನುದಾನ ಒದಗಿಸದೇ ತಾರತಮ್ಯ ಮಾಡುತ್ತಿದೆ. ಅಷ್ಟೇ ಅಲ್ಲ ಅನುದಾನ ಬಳಕೆಯಲ್ಲಿಯೂ ಸಾಕಷ್ಟು ಲೋಪಗಳಿದ್ದು, ಅಭಿವೃದ್ಧಿ ವೇಗ ನಿರೀಕ್ಷಿಸಿದಂತಿಲ್ಲ. ಶಾಸಕರ ನಿರಾಸಕ್ತಿ , ಅಧಿಕಾರಿಗಳ ವೈಫಲ್ಯದಿಂದ ಕಾಮಗಾರಿಗಳು ಪೂರ್ಣಗೊಳ್ಳುವುದೂ ವಿಳಂಬವಾಗುತ್ತಿದೆ ಎಂದು ರಾಯಚೂರಿನ ಹೈ.ಕ. ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ, ಡಾ.ರಝಾಕ್ ಉಸ್ತಾದ್ ಅವರು ತಿಳಿಸಿದ್ದಾರೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು...

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...