ಕಳೆದ ನವೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ. 4.91ಕ್ಕೆ ಏರಿಕೆಯಾಗಿದೆ. ಆಹಾರ ವಸ್ತುಗಳ ದರ ಹೆಚ್ಚಳವಾಗಲು ಇದಕ್ಕೆ ಪ್ರಮುಖ ಕಾರಣವಾಗಿದೆ.
ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ, ಅಕ್ಟೋಬರ್ ತಿಂಗಳಿನಲ್ಲಿ ಶೇ. 4.48 ಇತ್ತು ಎಂದು ಸರ್ಕಾರ ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.
ಸೂಚ್ಯಂಕದಲ್ಲಿ ಸುಮಾರು ಅರ್ಧದಷ್ಟು ಪಾಲು ಹೊಂದಿರುವ ಆಹಾರ ವಸ್ತುಗಳ ದರದಲ್ಲಿ ಶೇ. 4.48 ರಷ್ಟು ಏರಿಕೆಯಾಗಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಶೇ. 0.85 ರಷ್ಟು ಅಧಿಕವಾಯಿತು.
ಖಾದ್ಯ ತೈಲಗಳ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತರಕಾರಿಗಳ ದರದಲ್ಲಿ ಶೇ.13.6 ಇಳಿಕೆಯಾಗಿತ್ತು.
ಇಂಧನಗಳ ರಿಟೇಲ್ ದರದಲ್ಲಿ ಶೇ. 13.35 ಹೆಚ್ಚಳವಾಗಿದೆ. ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸಲು ಆರ್ ಬಿಐ ತನ್ನ ದ್ವೈ ಮಾಸಿಕ ಹಣಕಾಸು ನೀತಿಯಲ್ಲಿ ಆದ್ಯತೆ ನೀಡುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೀತಿಯ ಪ್ರಕಾರ ಚಿಲ್ಲರೆ ಹಣದುಬ್ಬರ ಶೇ.4ಕ್ಕಿಂತ 2% ಹೆಚ್ಚು ಅಥವಾ ಕಡಿಮೆ ಯ ಮಟ್ಟದಲ್ಲಿದ್ದರೆ ಸುರಕ್ಷಿತ ಮಟ್ಟದಲ್ಲಿದೆ ಎಂದರ್ಥ. ಮೊಬೈಲ್ ಬಿಲ್, ಜವಳಿ ಉತ್ಪನ್ನಗಳ ದರ ಹೆಚ್ಚಳದ ಪರಿಣಾಮ ಚಿಲ್ಲರೆ ಹಣದುಬ್ಬರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.