ವಿಧಾನ ಮಂಡಲ ಅಧಿವೇಶನದ ಮೊದಲ ದಿನ, ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆ ಮೆರೆದು ನಾಡ ದ್ರೋಹದ ವರ್ತನೆ ತೋರಿಸಿದೆ. ಪರವಾನಗಿ ಇಲ್ಲದೇ ಇದ್ದರೂ ವ್ಯಾಕ್ಸಿನ್ ಡಿಪೋ ಬಳಿ ಮಹಾ ಮೇಳಾವ ನಡೆಸಲು ಯತ್ನಿಸಿದ ಎಂ ಇ ಎಸ್ ಕಾರ್ಯಕರ್ತರು ಪೊಲೀಸರೊಂದಿಗೆ ವಾದ ವಿವಾದ ನಡೆಸಿದರು.
ಮಹಾ ಮೇಳಾವದ ವೇದಿಕೆಯನ್ನು ರಸ್ತೆ ಮೇಲೆ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ವೇದಿಕೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಆದರೆ, ಎಂಇಎಸ್ ಕಾರ್ಯಕರ್ತರು, ಬಲವಂತವಾಗಿ ವೇದಿಕೆಯಿಂದ ಕೆಳಗಿಳಿಸುವ ಪ್ರಯತ್ನ ನಡೆಯಿತು. ಈ ಸಂದರ್ಭದಲ್ಲಿ ಎಂಇಎಸ್ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಹಠ ಹಿಡಿದು ಕುರ್ಚಿ ಗಳಿಲ್ಲದೇ ವೇದಿಕೆಯ ಮೇಲೆ ಕುಳಿತ ಘೋಷಣೆಯನ್ನು ಕೂಗಿದರು. ಮಹಾನಗರ ಪಾಲಿಕೆ ಸಿಬ್ಬಂದಿಗಳು, ವೇದಿಕೆಯನ್ನು ತೆರವುಗೊಳಿಸಲಾಗಿದೆ ಅಸಹಾಯಕರಾಗಿ ನಿಂತಿದ್ದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು, ಎಂಇಎಸ್ ಮುಖಂಡ ದೀಪಕ್ ದಳವಿ ಅವರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ನಂತರ ಮಸಿ ಬಳೆದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.