ರಾಜ್ಯ ಸರ್ಕಾರ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯದೆ ವೈದ್ಯಕೀಯ ಸೀಟುಗಳನ್ನು ಹಿಂತಿರುಗಿಸುವ ವಿದ್ಯಾರ್ಥಿಗಳಿಗೆ ಅಧಿಕ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.
“2000-19 20 ಹಾಗೂ 2020-21 ನೇ ಸಾಲಿನಲ್ಲಿ ಮಾಪ್ಅಪ್ ಸುತ್ತಿನ ನಂತರ ಎನ್ ಆರ್ ಐ ಹಾಗೂ ಆಡಳಿತ ಮಂಡಳಿ ಕೋಟಾದಡಿ 1227 ಸೀಟುಗಳು ಉಳಿದಿವೆ ಆದರೆ ಸರ್ಕಾರಿ ಕೋಟಾದಡಿ ಸೀಟುಗಳು ಉಳಿದಿಲ್ಲ” ಎಂದು ತಿಳಿಸಿದರು.
” ರಾಜ್ಯದಲ್ಲಿ ಪ್ರತಿವರ್ಷ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. 89,359 ಮಂದಿ ವಿದ್ಯಾರ್ಥಿಗಳು ಅರ್ಹತೆ ಪಡೆದು 33,651 ಮಂದಿ ಸಂದರ್ಶನ ಎದುರಿಸುತ್ತಾರೆ. ಆದರೆ ಕೇವಲ 8535 ಸರ್ಕಾರಿ ಕೋಟಾದಡಿ ಸೀಟುಗಳು ಲಭ್ಯವಾಗುತ್ತವೆ. ವೈದ್ಯಕೀಯ ಸೀಟುಗಳಿಗೆ ಇಷ್ಟೊಂದು ಬೇಡಿಕೆಯಿರುವಾಗ 2019-20 ಹಾಗೂ 2020-21 ನೇ ಸಾಲಿನಲ್ಲಿ 1227 ವೈದ್ಯಕೀಯ ಸೀಟುಗಳು ಉಳಿದಿದೆ. 3 ಹಂತದ ಕೌನ್ಸೆಲಿಂಗ್ ನಂತರ ಮಾಪ್ಅಪ್ ಸುತ್ತಿನ ಬಳಿಕವೂ ಉಳಿಯುವ ವೈದ್ಯಕೀಯ ಸೀಟುಗಳು ಹಂಚಿಕೆ ಮಾಡಲು ಸರ್ಕಾರ ಮತ್ತೊಂದು ಸುತ್ತಿನ ಕೌನ್ಸಿಲಿಂಗ್ ನಡೆಸಬೇಕು” ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಎನ್.ರವಿಕುಮಾರ್ ಆಗ್ರಹಿಸಿದರು.