ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ 4 ನೇ ಪಂದ್ಯವು ಕರ್ನಾಟಕ ಮತ್ತು ಬರೋಡಾ ತಂಡಗಳ ನಡುವೆ ಪಂದ್ಯ ನಡೆಯಿತು. ಬರೋಡ ತಂಡದ ವಿರುದ್ಧ ಜಯ ಸಾಧಿಸಿದೆ. ಪ್ರಸ್ತುತ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ
ಕರ್ನಾಟಕ ಸತತ ಮೂರನೇ ಜಯ ಸಾಧಿಸಿದಂತಾಗಿದೆ.
ತಿರುವನಂತಪುರದ ಮಂಗಳಾಪುರ ಕ್ರೀಡಾಂಗಣದಲ್ಲಿ ನಡೆದ “ಬಿ” ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡಕ್ಕೆ ಮೊದಲು ಬ್ಯಾಟಿಂಗ್ ಆಡಲು ಅವಕಾಶ ಮಾಡಿಕೊಟ್ಟಿತು.
ಮೊದಲಿಗೆ ಬ್ಯಾಟಿಂಗ್ ಮಾಡಿದ ಬರೋಡಾ ತಂಡ 48.3 ಓವರ್ ಗಳಲ್ಲಿ 176 ರನ್ ಗಳಿಸಿತು.ಹೆಚ್ಚು ರನ್ ಗಳಿಸಲು ಕರ್ನಾಟಕದ ಬೌಲರ್ ಗಳು ಬಿಟ್ಟು ಕೊಡಲಿಲ್ಲ.
ಬರೋಡಾ ತಂಡದಲ್ಲಿ ಮೊದಲು ಬ್ಯಾಟಿಂಗ್ ಹಂತದಲ್ಲಿ ಅಂಕಣಕ್ಕೆ ಇಳಿದು ಆಡಿದ ಆರಂಭಿಕ ಜೋಡಿ ಕೇದಾರ್ ದೇವದಾರ್ ಮತ್ತು ಆದಿತ್ಯ ವಾಘಮೊಡೆ 59 ರನ್ ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು. ಇವರಿಬ್ಬರ ವಿಕೆಟ್ ಕೌಶಿಕ್ ಉರುಳಿಸಿದರು.ಹಿಂದಿನ ಪಂದ್ಯದ ಹೀರೋ ಪ್ರವೀಣ್ ದುಬೆ ಅವರು ಅಭಿಮನ್ಯು ಸಿಂಗ್ ರಜಪೂತ್ ವಿಕೆಟ್ ಪಡೆದರು.ನಂತರ ಕೃಣಲ್ ಪಾಂಡ್ಯ ತಾಳ್ಮೆಯ ಆಟದ ಮೂಲಕ ರನ್ ಸೇರಿಸಿದರು.
ಕೆ. ಸಿ ಕಾರ್ಯಪ್ಪ ಅವರ LBW ಬಲೆಗೆ ಬಿದ್ದ ನಂತರ ತಂಡದ ವಿಕೆಟ್ ಗಳು ಬೇಗನೆ ಉರುಳತೊಡಗಿದವು. 5 ಬ್ಯಾಟರ್ ಗಳು ಎರಡoಕಿ ಮೊತ್ತ ದಾಟಲಾಗದೆ ಮರಳಿದರು.
ನಂತರ ಅಂಕಣಕ್ಕೆ ಇಳಿದ ಭಾನು ಪತ್ಯ ಏಕಾಂಗಿ ಹೋರಾಟದ ಮೂಲಕ ತಂಡದ ಇನ್ನಿಂಗ್ಸ್ ನ 2 ಸಿಕ್ಸರ್ ಗಳು ಅವರ ಬ್ಯಾಟಿಂಗ್ ನಿಂದ ಬಂದವು. ತಂಡವು 176 ರನ್ ಗಳಿಸುವಲ್ಲಿ ಆಸರೆಯಾದರು.
176 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಬರೋಡಾ ಇನ್ನಿಂಗ್ಸ್ ಮುಗಿದ ಕೂಡಲೇ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ನಂತರ ಮತ್ತೆ ಆರಂಭ ಗೊಂಡಾಗ 42 ಓವರ್ ಗಳಲ್ಲಿ 147 ರನ್ ಗಳ ಗುರಿಯನ್ನು ನೀಡಲಾಯಿತು.
ಆರಂಭಿಕ ಜೋಡಿ R. ಸಮರ್ಥ್ ಮತ್ತು ರೋಹನ್ ಕದಂ 44 ರನ್ ಸೇರಿಸಿದರು.ಅಷ್ಟರಲ್ಲಿ ರೋಹನ್ ವಿಕೆಟ್ ಕಳೆದುಕೊಂಡರೂ.
ನಂತರ ಸಿದ್ದಾರ್ಥ್ ಆಟ ರಂಗೇರಿತು. 25 ರನ್ ಗಳ ಜೊತೆಯಾಟವಾಡಿ ಸಮರ್ಥ್ ಔಟಾದರೆ, ಕರುಣ್ ನಾಯರ್ ಕೂಡ ರನ್ ಔಟ್ ಆಗಿ ವಾಪಸಾದರು.
ಕ್ರೀಸ್ ನಲ್ಲಿ ಸಿದ್ದಾರ್ಥ್ ಜೊತೆ 5 ನೇ ವಿಕೆಟ್ ಹಂತಕ್ಕೆ ಕೀಪರ್ ಶರತ್ ಜೊತೆಗೂಡಿ 47 ರನ್ ಗಳನ್ನ ತಂಡಕ್ಕೆ ಸೇರಿಸಿದರು.ಒಟ್ಟು 150 ರನ್ ಗಳಿಸುವಂತೆ ಮಾಡಿ 38.4 ಓವರ್ ಗಳಲ್ಲಿ ಜಯ ತಂದರು.
ವಿಜಯ್ ಹಜಾರೆ ಟ್ರೋಫಿ : ಬರೋಡಾ ವಿರುದ್ಧ ಕರ್ನಾಟಕ ಜಯ
Date: