ವಾತ್ಸ್ಯಾಯನ ಸೇರಿದಂತೆ ರಚಿಸಿದ ಗ್ರಂಥಗಳಲ್ಲಿ ಪುರುಷ ಪಾರಮ್ಯವಿದೆ ಎಂದು ಹೇಳಲಾಗುತ್ತದೆ. ಹೌದು, ಪುರುಷ ಪಾರಮ್ಯ ಇದೆ. ಆಗಿನ ಜಗತ್ತು ಹಾಗಿತ್ತು. ಈಗಿನ ಜಗತ್ತು ಬಿನ್ನವಾಗಿದೆ. ಹಾಗಂತ ವಾತ್ಸ್ಯಾಯನ ಕೃತಿಯನ್ನು ತಿದ್ದುವ ಹಾಗಿಲ್ಲ. ಅದನ್ನು ಒಪ್ಪಿಕೊಂಡು ಅದರ ಜೊತೆಗೆ ಸ್ತ್ರೀಪರವಾದ ವಿಚಾರವನ್ನು ಸೇರಿಸಿಕೊಂಡರಾಯಿತು ಎಂದು ವಿದ್ವಾಂಸರಾದ ಶತಾವಧಾನಿ ಡಾ.ಆರ್. ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಯೋಧ್ಯ ಪ್ರಕಾಶನವು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಹೊರತರಲಾದ ‘ವಾತ್ಸ್ಯಾಯನ ಕಾಮಸೂತ್ರ’ಕನ್ನಡ ಅನುವಾದ ( ಕನ್ನಡಕ್ಕೆ ಡಾ. ವಿಶ್ವನಾಥ ಕೃ.ಹಂಪಿಹೊಳಿ ) ಕೃತಿಯನ್ನು ಬಿಡುಗಡೆ ಮಾಡಿದರು.
ಪುರಾತನ ಕಾಲದಲ್ಲಿ ರಚನೆಯಾದ ಧರ್ಮಾರ್ಥ ಶಾಸ್ತ್ರಗಳನ್ನು ಪರಸ್ಪರ ಹೊಂದಾಣಿಕೆಯಿಂದ ನೋಡದೆ ತೆಗಳುವುದು ಆತ್ಮವಂಚನೆ, ಜ್ಞಾನ ವಂಚನೆ, ವಿದ್ಯಾ ವಂಚನೆಯಾಗುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಜಗತ್ತಿಗೆ ಕೊಟ್ಟ ಅತ್ಯಂತ ಜನಪ್ರಿಯ ಗ್ರಂಥಗಳಲ್ಲಿ ವಾತ್ಸ್ಯಾಯನ ಕಾಮಸೂತ್ರ ಕೂಡ ಒಂದು. ಜಗತ್ತಿಗೆ ಭಾಷೆಯನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿಕೊಟ್ಟವರು ನಾವು. ಬದುಕನ್ನು ನೋಡುವುದು ಹೇಗೆ ಎಂದು ಭಗವದ್ಗೀತೆಯ ಮೂಲಕ ತಿಳಿಯಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ರಂಗಭೂಮಿ ನಟ ಎಸ್. ಎನ್. ಸೇತುರಾಮ್, ವಿದ್ವಾಂಸರಾದ ವೀಣಾ ಬನ್ನಂಜೆ,ಕೃತಿಯ ಅನುವಾದಕರಾದ ಡಾ. ವಿಶ್ವನಾಥ ಕೃ.ಹಂಪಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈಗಿನ ಜಗತ್ತಿನಲ್ಲಿ ಸ್ರ್ರೀಪರ ಚಿಂತನೆ ಸೇರಿಸಿಕೊಳ್ಳಬೇಕು
Date: