ಮಡಿಕೇರಿ ರಾಮನಗರ ಜಿಲ್ಲೆಯ ಕನಕಪುರದ ಕಾವೇರಿ ವನ್ಯಜೀವಿ ವಲಯದಲ್ಲಿ ಆನೆ ಹಿಂಡಿನಿಂದ ಬೇರ್ಪಟ್ಟ ಒಂದು ಕಾಡಾನೆಮರಿಯು ಸಂಚರಿಸುತ್ತಿತ್ತು. ಆನೆ ಮರಿಯನ್ನು ಈ ವ್ಯಾಪ್ತಿಯ ಅರಣ್ಯಧಿಕಾರಿ ವೈ .ಕಿರಣ್ ಕುಮಾರ್ ರಕ್ಷಿಸಿದ್ದಾರೆ.
ಮರಿಯ ಆರೋಗ್ಯ ಕ್ಷೇಮವನ್ನು ವನ್ಯಜೀವಿ ತಜ್ಞರಾದ ಡಾ. ನಾಗರಾಜ್ ಮತ್ತು ಡಾ. ರಮೇಶ್ ಅವರು ಪರೀಕ್ಷೆ ಮಾಡಿದ್ದಾರೆ. ಆನೆ ಮರಿಯೂ ಆರೋಗ್ಯವಾಗಿದೆ ಎಂಬುದು ದೃಢಪಟ್ಟಿದೆ. ಈ ಮರಿಗೆ ಪ್ರತಿ ಎರಡು ಗಂಟೆಗೆ ಒಮ್ಮೆ ಒಂದು ಲೀಟರ್ ಹಾಲು ನೀಡಲಾಗುತ್ತಿದೆ. ಆರು ತಿಂಗಳವರೆಗೂ ಇದೆ ಆಹಾರಕ್ರಮವನ್ನು ನೀಡಲಾಗುತ್ತದೆ. ಅನಂತರ ಮೃದು ಆಹಾರವನ್ನು ನೀಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಶಿಬಿರದಲ್ಲಿ ಒಂದು ತಿಂಗಳ ಹಿಂದೆ ಕರುವಿಗೆ ಜನ್ಮ ನೀಡಿದ ವರಲಕ್ಷ್ಮಿ ಎಂಬ ಆನೆ ಇದೆ. ಇನ್ನು 22 ಆನೆಗಳಿವೆ. ಅವುಗಳ ಬಳಿ ರಕ್ಷಿಸಿದ ಆನೆ ಮರಿಯನ್ನು ಆರೈಕೆಗಾಗಿ ವರಲಕ್ಷ್ಮಿಯ ಬಳಿ ಬಿಡುವ ಯೋಜನೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಪ್ರಸ್ತುತ ಆನೆ ಮರಿಯನ್ನು ಮಂಜು ಹಾಗೂ ಕಾವಾಡಿ ಮಹದೇವ ಎಂಬುವರರ ಆರೈಕೆ ಯಲ್ಲಿದೆ.