Tuesday, November 26, 2024
Tuesday, November 26, 2024

ರಾಷ್ಟ್ರೀಯ ನಾಟ್ಯೋತ್ಸವ

Date:

ಗಣಪತಿ ಪೂಜೆಯೊಂದಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭಗೊಂಡಿತು.

ನಾಟಕೋತ್ಸವದ ಕಾರ್ಯಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ ಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಭಾಧ್ಯಕ್ಷರಾದ ಶ್ರೀ ಭಾಸ್ಕರ್ ರಾವ್ ಮತ್ತು ಅಭ್ಯಾ ಗತ ರೆಲ್ಲರು ಸೇರಿ ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ನಾಟಕೋತ್ಸವದ ಪ್ರಮುಖ ಭಾಗವಾದ ‘ಶ್ರೀ ಗಜಾನನ ಹೆಗಡೆ ಪ್ರಶಸ್ತಿ’ ಪುರಸ್ಕೃತರಾದ ಶ್ರೀ ಸುಬ್ರಾಯ ಭಾಗವತ ಕಪ್ಪೆಕೆರೆ ಯವರನ್ನು ಡಾ.ಜಿ.ಕೆ. ಹೆಗಡೆ, ಹರಿಕೆರೆಯವರು ಅಭಿನಂದನಾ ನುಡಿಗೈದರು. ಶ್ರೀ ಕಪ್ಪೆಕೆರೆ ಭಾಗವತರು ಭಾಗವತ ಘರಾಣಿಯನ್ನು ಪ್ರಶಂಶಿಸುತ್ತಾ, ಅವರು ಮೇಳದಲ್ಲಿ ಮಾಡಿದ ವಿಶಿಷ್ಟ ಶೈಲಿಯನ್ನು ಕೊಂಡಾಡಿದರು.

ಭಾಗವತಿಕೆಯಲ್ಲಿ ಪರಿಪೂರ್ಣತೆ ಇರುವ ಇವರು ಚಂಡೆ, ಮದ್ದಳೆ ವಾದನ ಮತ್ತು ನೃತ್ಯ ಶೈಲಿಯಲ್ಲಿ ಇವರ ಪಾಂಡಿತ್ಯವನ್ನು ಕೊಂಡಾಡಿದರು. ‘ಶ್ರೀ ಗಜಾನನ ಹೆಗಡೆ ಪ್ರಶಸ್ತಿ’ ಯನ್ನು ಸಂಭ್ರಮದ ವೇದಿಕೆಯಲ್ಲಿ ಸ್ವೀಕರಿಸಿ ಮಾತನಾಡಿದ ಶ್ರೀ ಸುಬ್ರಾಯ ಭಾಗವತ, ಕಪ್ಪೆಕೆರೆಯವರು ಪರಂಪರಾಗತ ಭಜನೆ ಮಾಡುವುದರಿಂದ ಆರಂಭಗೊಂಡ ನನ್ನ ಕಲಾ ಸೇವೆ ಇಡಗುಂಜಿ ಮೇಳದ ಸಂಪರ್ಕದಿಂದ ಭಾಗವತಿಕೆಯನ್ನು ಬದ್ಧತೆಯಲ್ಲಿ ಸ್ವೀಕರಿಸಿ, ಶಿಸ್ತುಬದ್ಧವಾಗಿ ಅಧ್ಯಯನ ಮಾಡಿ, ಸಮಾಜ ಗುರುತಿಸಿ, ಗಜಾನನ ಹೆಗಡೆ ವೇದಿಕೆಯಲ್ಲಿ ಅವರ ಹೆಸರಿನಲ್ಲಿ ಇರುವ ಪ್ರಶಸ್ತಿ ಸ್ವೀಕರಿಸುವ ಭಾಗ್ಯ ಬಂದದ್ದು ನನ್ನ ಕಲಾಸೇವೆಯ ಪಥದ ಅನನ್ಯತೆಯ ಸಂಕೇತ ಎಂದು ಅಭಿಪ್ರಾಯಪಟ್ಟರು.

ಕಲಾವಿದರು ಸಮಾಜದ ಸ್ವತ್ತಾಗಿದ್ದರೂ, ಪ್ರೇಕ್ಷಕರ ಬದಲಾದ ಭಾವ ತರಂಗಗಳಿಗೆ ಸಮೀಕರಿಸುವ ಕಲಾಭಿನಯ ಪರಂಪರೆಗೆ ತೊಡಕಾಗಿ ಶಾಸ್ತ್ರೀಯತೆ ಬಂಗ ಬರುವ ಸಾಧ್ಯತೆ ಕಾಣುತ್ತಿದೆ ಎಂಬ ಎಚ್ಚರಿಕೆಯ ಅಭಿಪ್ರಾಯಪಟ್ಟರು.

ಶ್ರೀ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವ ಸಮ್ಮಾನ ಸಾಹಿತಿಗಳಾದ ಶ್ರೀ ಎಲ್. ಆರ್. ಭಟ್, ಯಕ್ಷಗಾನ ಸಂಶೋಧಕರಾದ ಡಾ. ಪಾದೇಕಲ್ಲು ವಿಷ್ಣುಭಟ್, ಸಾಹಿತಿಗಳಾದ ಶ್ರೀ ಸುಮುಖಾನಂದ ಜಳವಳ್ಳಿ, ಮದ್ದಳೆ ವಾದಕರಾದ ಶ್ರೀ ಮಂಜುನಾಥ ಭಂಡಾರಿ ಅವರಿಗೆ ನೀಡಿ ಗೌರವಿಸಲಾಯಿತು. ಯಕ್ಷಗಾನದ ಸಂಭಾಷಣೆಯು ಸಾಹಿತ್ಯದ ಭಾಗ ಇಂದುಶ್ರೀ ಸುಮುಖಾನಂದ ಜಳವಳ್ಳಿ ಅಭಿಪ್ರಾಯಪಟ್ಟರು.

ಡಾ. ಪಾದೇಕಲ್ಲು ವಿಷ್ಣು ಭಟ್ ಅಭಿಪ್ರಾಯ ವ್ಯಕ್ತಪಡಿಸುತ್ತಾ ಯಕ್ಷಗಾನ ಎಂಬ ಕಲೆಯು ಹಲವು ಆಯಾಮಗಳಿಗೆ ಸಂಶೋಧನೆಗೆ ಪೂರಕ ಎಂದರು ಅಭ್ಯಾಗತರಿಗೆ ಉಪಸ್ಥಿತರಿದ್ದ ಪೋಕ್ ಲ್ಯಾಂಡ್ ಅಧ್ಯಕ್ಷರಾದ ಡಾ.ವಿ. ಜಯರಾಜನ್ ಅವರು ಇಡಗುಂಜಿ ಮೇಳ ಕಲಿಯ ಒಂದು ಘರಾಣೆ ಎಂದರು. ಶ್ರೀ ನಾರಾಯಣ ಯಾಜಿಯವರು ಮಾತನಾಡುತ್ತಾ ಇಡಗುಂಜಿ ಮೇಳದ ಕಲಾವಿದರಾದ ಶ್ರೀ ಶ್ರೀರಾಮ ಹೆಗಡೆ, ಶ್ರೀ ಗಜಾನನ ಹೆಗಡೆ, ಶ್ರೀ ಮಹಾಬಲ ಹೆಗಡೆ ಎಲ್ಲರೂ ಕಲಾ ರಂಗಭೂಮಿಯಲ್ಲಿ ತಮ್ಮದೇ ಅನನ್ಯತೆಯನ್ನು ಮೆರೆದು ವಿಶಿಷ್ಟತೆಯನ್ನು ಸಲ್ಲಿಸಿದವರೆಂದರು.

ಶ್ರೀ ಶಿವಾನಂದ ಹೆಗಡೆಯವರು ವಂದಿಸಿದರು.

ರಾಷ್ಟ್ರೀಯ ನಾಟ್ಯೋತ್ಸವ
ರಾಷ್ಟ್ರೀಯ ನಾಟ್ಯೋತ್ಸವ

ಶ್ರೀ. ಬಿ.ಎಮ್.ಭಟ್ , ಶ್ರೀ ಸುಧೀಶ್ ನಾಯಕ್ ಹಾಗೂ ಶ್ರೀ ಎಲ್.ಎಮ್. ಹೆಗಡೆ ಕೆರೆಮನೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಜ್ಯೋತಿ ಹೆಗಡೆ, ಶಿರಶಿ ಅವರು ರುದ್ರವೀಣೆಯನ್ನು ಪ್ರಸ್ತುತ ಪಡಿಸಿದರು.

ಶ್ರೀ ಗುರುಮೂರ್ತಿ ವೈದ್ಯ ಇವರು ಪಖವಾಜ್ ದಲ್ಲಿ ಸಾಥ್ ನೀಡಿದರು. ಫೋನ್ ಲ್ಯಾಂಡ್ ಕೇರಳ, ಶ್ರೀ ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡದವರಿಂದ ಒಟ್ಟನ್ ತುಳ್ಳಾಲ್ ಮತ್ತು ‘ ಶೀತಂಕನ್ ತುಳ್ಳಾಲ್’ ನೃತ್ಯ ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ನೃತ್ಯ ನಿಕೇತನ, ನಂತರ ಕೊಡವೂರು ತಂಡದವರಿಂದ ‘ನಾರಸಿಂಹ’ (ಒಳಿತಿನ ವಿಜಯದ ಕಥನ) ವೃತ್ತಿ ರೂಪಕವು ಪ್ರದರ್ಶಿಸಲ್ಪಟ್ಟಿತು.

ಅಪೂರ್ವ ಪೂರ್ವ ಸ್ಮರಣಿ ಗೋಷ್ಠಿ:
ದಿನಾಂಕ -05-12-2021 ರ ಬೆಳಿಗ್ಗೆ 10:30 ನಡೆದ ಅಪೂರ್ವ ಪೂರ್ವ ಸ್ಮರಣೆ ಗೋಷ್ಠಿಯಲ್ಲಿ ಪ್ರೊ. ಎಂ. ಎ. ಹೆಗಡೆ, ಶಿರಸಿ ಇವರ ಬಗ್ಗೆ ಶ್ರೀ ದಿವಾಕರ ಹೆಗಡೆ, ಸದಸ್ಯರು, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು, ಅವರು, ಅವರ ವ್ಯಕ್ತಿತ್ವ ಹಾಗೂ ಕಲೆಯ ಬಗೆಗಿನ ಒಲವನ್ನು ಹೇಳುತ್ತಾ ಕಲೆಯಲ್ಲಿ ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡೂ ಇರಬೇಕು. ಪರಂಪರೆ ಮತ್ತು ತಂತ್ರ ಎರಡು ಮುಖ್ಯ ಎಂಬ ಅವರ ಆಶಯವನ್ನು ಹೇಳಿದರು. ನಂತರ ವಿದ್ವಾನ್ ಶ್ರೀ ಉಮಾಕಾಂತ ಭಟ್ ಕೆರೆಕೈ, ವಿದ್ವಾಂಸರು, ಅರ್ಥಧಾರಿಗಳು ಮಾತನಾಡುತ್ತಾ ಅವರ ಜೀವನಶೈಲಿ ,ಕಲೆಯ ಬಗೆಗಿನ ಅವರ ಅಗಾಧ ಜ್ಞಾನವನ್ನು ವಿವರಿಸಿದರು.

ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು ಆದ ಡಾ. ಎಂ. ಪ್ರಭಾಕರ ಜೋಶಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಎಂ. ಎ. ಹೆಗಡೆಯವರ ವ್ಯಕ್ತಿತ್ವ ಹಾಗೂ ಭಾಷಾ ಶುದ್ಧತೆಯನ್ನು ನೆನಪು ಮಾಡಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಕೆರೆಮನೆ ಶಿವಾನಂದ ಹೆಗಡೆ ಯವರ ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...