Wednesday, February 4, 2026
Wednesday, February 4, 2026

ಶೀರ್ಷಿಕೆ ಜೂ.ಹಾಕಿ : ಭಾರತ “ಸೆಮಿ” ಯಲ್ಲಿ ಸೋಲು.

Date:

ಜೂನಿಯರ್ ವಿಶ್ವಕಪ್ ಹಾಕಿ ಸೆಮಿಫೈನಲ್ ಪಂದ್ಯವು ಭಾರತ ಮತ್ತು ಜರ್ಮನಿ ತಂಡಗಳ ನಡುವೆ ನಡೆಯಿತು. ಭಾರತ ತಂಡದ ವಿರುದ್ಧ ಜರ್ಮನಿ ಜಯಗಳಿಸಿ ಫೈನಲ್ ಹಂತವನ್ನು ತಲುಪಿದೆ.
ಮೊದಲ ಸೆಮಿಫೈನಲ್ ನಲ್ಲಿ ಫ್ರಾನ್ಸ್. ಅರ್ಜೆಂಟೀನ ವಿರುದ್ಧ ಮತ್ತು ರೋಚಕ ಶೂಟೌಟ್ ನಲ್ಲಿ ಬೆಲ್ಜಿಯಂ ವಿರುದ್ಧ ಸ್ಪೇನ್ ಗೆಲುವು ಸಾಧಿಸಿವೆ.. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ 2 ಗೋಲ್ ಗಳಿಸಿದ್ದವು. 4 ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಪಾವು ಅವರು ಗೋಲ್ ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 24ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ನಲ್ಲೂ ಕುನಿಲ್ ಚೆಂಡನ್ನು ಗುರಿ ಮುಟ್ಟಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಶೈಲಿ ಆಟವಾಡಿದ ಜರ್ಮನಿ. ಕೊನೆಯವರೆಗೂ ಪ್ರಾಬಲ್ಯ ಸಾಧಿಸಿತ್ತು. 15ನೇ ನಿಮಿಷದಲ್ಲಿ ಕ್ಲೆನ್ಲೆನ್ ‌ಎರಿಕ್ ಗೋಲು ಹೊಡೆದು ತಂಡದ ಖಾತೆ ತೆರೆದರು. ಆರು ನಿಮಿಷಗಳ ನಂತರ ಫಿಲಿಪ್ ಹಾಲ್ಜ್ ಮುಲ್ಲರ್ 21 ನಿಮಿಷ ಮತ್ತು ಹೆಸೆನ್ ಮುಲ್ಲರ್ 24 ನಿಮಿಷ ಅವರು ಫೀಲ್ಡ್ ಗೋಲ್ಗಳನ್ನು ಹೊಡೆದರು. 25ನೇ ನಿಮಿಷದಲ್ಲಿ ಕ್ರಿಸ್ಟೋಫರ್ ಕಟರ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು.
ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡವು 2-4 ರಿಂದ ಜರ್ಮನಿ ಎದುರು ಸೋತಿತು. ಇದರಿಂದಾಗಿ ಸತತ ಎರಡನೇ ಸಲ ಪ್ರಶಸ್ತಿ ಜಯಿಸುವ ಭಾರತ ತಂಡದ ಕನಸು ಒಡೆದುಹೋಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...