Sunday, December 14, 2025
Sunday, December 14, 2025

ಅಂಚೆಯ ಮೂಲಕ ಆಪತ್ಬಾಂಧವ ಸೇವೆ

Date:

ಲಾಕ್ ಡೌನ್ ಸಂದರ್ಭದಲ್ಲಿ ಎಚ್ಐವಿ ಸೋಂಕಿತ ದಂಪತಿಗಳು ರಾಯಗಡದಲ್ಲಿರುವ ತಮ್ಮ ಸ್ಥಳೀಯ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅವರು ತಮ್ಮ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ಮುಂದುವರಿಸುವ ಬಗ್ಗೆ ಚಿಂತಿತರಾಗಿದ್ದರು. ಆಂಟಿರೆಟ್ರೋವೈರಲ್ ಚಿಕಿತ್ಸೆಯು ಏಡ್ಸ್ ಸೋಂಕಿತರಿಗೆ ಅತ್ಯವಶ್ಯಕವಾಗಿದೆ. ಆಂಟಿರೆಟ್ರೋವೈರಲ್ ಚಿಕಿತ್ಸೆ ಇಲ್ಲದೆ, ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಆ ಸಮಯದಲ್ಲಿ ಮುಂಬೈನ ಜಿಲ್ಲಾ ಏಡ್ಸ್ ನಿಯಂತ್ರಣ ಸಂಸ್ಥೆಯು ಅಂಚೆ ಮೂಲಕ ಔಷಧಿಯನ್ನು ತಲುಪಿಸಿ ಮಾನವೀಯತೆ ಮೆರೆದಿದೆ. ಈ ಸಂಸ್ಥೆಯು ರೋಗಿಗಳ ಗೌಪ್ಯತೆಯನ್ನು ಕಾಪಾಡಿಕೊಂಡು ಅಗತ್ಯ ಔಷಧಿ ಗಳನ್ನು ಮನೆಬಾಗಿಲಿಗೆ ತಲುಪಿಸುತ್ತದೆ.
ಈ ಸಂಸ್ಥೆಯು ರೋಗಿಗಳ ಗುರುತಿನ ಮೇಲೆ ರಾಜಿ ಮಾಡಿಕೊಳ್ಳದೆ ಎಚ್‌ಐವಿ ಔಷಧಿಗಳನ್ನು ತಲುಪಿಸಲು ಹೊಸ ಮಾರ್ಗಗಳನ್ನು ಕಂಡುಕೊಂಡಿದೆ.
ಪರ್ಯಾಯ ಮಾರ್ಗಗಳನ್ನು ಅನುಸರಿಸಿ ರೋಗಿಗಳಿಗೆ ಅಗತ್ಯ ಸಮಯಕ್ಕೆ ಔಷಧಿಗಳನ್ನು ತಲುಪಿಸುವಲ್ಲಿ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕಳೆದ ವರ್ಷದಿಂದ, 95 ರೋಗಿಗಳು ಮನೆ ಬಾಗಿಲಿಗೆ ಔಷಧಿ ವಿತರಣೆಯಿಂದ ಪ್ರಯೋಜನ ಪಡೆದಿದ್ದಾರೆ. ಉತ್ತರಪ್ರದೇಶ, ಬಿಹಾರ, ಬಂಗಾಳ ಮತ್ತು ಮಹಾರಾಷ್ಟ್ರದ ದೂರದ ಜಿಲ್ಲೆಗಳ ರೋಗಿಗಳು ಮುಂಬೈನಲ್ಲಿ ಎಚ್ಐವಿ ಚಿಕಿತ್ಸೆಗಾಗಿ ನೋಂದಾಯಿಸಿಕೊಳ್ಳುತ್ತಾರೆ.
ಈ ಸಂಸ್ಥೆಯ ವತಿಯಿಂದ ಸ್ಪೀಡ್ ಪೋಸ್ಟ್ ಮೂಲಕ ಔಷಧಿಗಳು ತಲುಪಿಸಲಾಗುತ್ತದೆ.
ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಅಸಂಖ್ಯ ಪೆಟ್ಟಿಗೆಗಳನ್ನು ಸರಿಯಾದ ವಿಳಾಸಕ್ಕೆ ಆದರೆ, ಅವುಗಳು ಒಳಗೊಂಡಿರುವ ಔಷಧಿಗಳ ಸುಳಿವು ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳಲಾಗುತ್ತದೆ. ಮನೆಬಾಗಿಲಿಗೆ ಔಷಧಿ ವಿತರಿಸುವ ಕಾರ್ಯವು ART ಮಿತ್ರ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರಾರಂಭವಾಯಿತು. HIV ರೋಗಿಗಳು ART ಮಿತ್ರ ಚಿಕಿತ್ಸಾಲಯಗಳಿಂದ ತಮ್ಮ ಔಷಧಿಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಆದರೆ ಕಳೆದ ಮಾರ್ಚ್‌ನಲ್ಲಿ ಪ್ರಯಾಣದ ನಿರ್ಬಂಧಗಳು ಅಡ್ಡಿಪಡಿಸಿದ್ದರಿಂದ, ಎಲ್ಲಾ ಏಡ್ಸ್ ರೋಗಿಗಳಿಗೆ ಮುಂಬೈ ಜಿಲ್ಲೆಯ ಏಡ್ಸ್ ನಿಯಂತ್ರಣ ಸೊಸೈಟಿ ಸ್ಪೀಡ್ ಪೋಸ್ಟ್ ಮೂಲಕ ಔಷಧಿಗಳನ್ನು ಹಸ್ತಾಂತರಿಸಿದೆ. ಮನೆಯಲ್ಲಿ ಇದ್ದು ಔಷಧಿಗಳನ್ನು ಪಡೆಯಲು ಸಾಧ್ಯವಾಗದ ಪಕ್ಷದಲ್ಲಿ ಆರ್ಟ್ ಮಿತ್ರ ಚಿಕಿತ್ಸಾಲಯದ ಸಿಬ್ಬಂದಿಗಳೇ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಐವಿ ರೋಗಿಯನ್ನು ಭೇಟಿಯಾಗಿ ಔಷಧಿಗಳನ್ನು ಹಸ್ತಾಂತರಿಸುತ್ತಾರೆ.
ಮುಂಬೈನ ಸಂಸ್ಥೆಯ ಸೇವೆ ದೇಶದ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Visvesvaraya Technological University ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಾಗಾರ

Visvesvaraya Technological University ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನ...

B.Y. Raghavendra ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಬಿ.ವೈ.ರಾಘವೇಂದ್ರ ಮನವಿ

B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ....

CM Siddharamaih ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಭೆ

CM Siddharamaih ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ...