Thursday, February 5, 2026
Thursday, February 5, 2026

ಕಂಪನಿಗಳಿಗೆ ಭೂಮಿ ಕೊಡಲು ಸಿದ್ಧತೆ. – ನಿರಾಣಿ.

Date:

ಕೋವಿಡ್ ಕಾರಣದಿಂದ ಆರ್ಥಿಕ ಸಂಪನ್ಮೂಲದ ಕೊರತೆಯಾಗಿದೆ. ಅದನ್ನು 30 ಸಾವಿರ ಕೈಗಾರಿಕಾ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಗ್ಲೋಬಲ್ ಇನ್ವೆಸ್ಟರ್ಸ್ ಸಮಾವೇಶಕ್ಕೂ ಮೊದಲ ಮೂವತ್ತು ಸಾವಿರ ಎಕರೆಯಷ್ಟು ಕೈಗಾರಿಕಾ ಪ್ರದೇಶವನ್ನು ಹೊಂದಲು ಕೈಗಾರಿಕೆ ಇಲಾಖೆ ಮುಂದಾಗಿದೆ.
ಸದ್ಯ ಆರ್ಥಿಕ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಸೊರಗಿದ್ದ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಇಲಾಖೆ ಮುಂದಾಗಿದೆ.
ಸಬ್ಸಿಡಿ, ಲ್ಯಾಂಡ್ ಸೇಲ್ ಡೀಡ್ , ಪ್ರಕ್ರಿಯೆ ಸರಳಗೊಳಿಸುವ ವಾಗ್ಧಾನವನ್ನು ಮಾಡಿದೆ.
ಭೂಮಿ ಲಭ್ಯತೆ ಇಲ್ಲದ ಕಾರಣಕ್ಕೆ ಟಾಟಾ ನ್ಯಾನೊ ಕಂಪನಿಯು ಹೊರರಾಜ್ಯದ ಪಾಲಾಯಿತು. ಆ ಸಂದರ್ಭದಲ್ಲಿ ನಾನೇ ಕೈಗಾರಿಕಾ ಸಚಿವನಾಗಿದ್ದೆ. ಆ ನೋವು ಇನ್ನೂ ಕಾಡುತ್ತಿದೆ. ಮತ್ತೊಮ್ಮೆ ಅಂತಹ ಸಂದರ್ಭ ಮರುಕಳಿಸದಿರಲಿ ಎಂದು 30 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ ಎಂದು ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಬಂಡವಾಳ ಹರಿದು ಬರಲಿದೆ. ಆದರೆ, ಹೂಡಿಕೆದಾರರಿಗೆ ಅಗತ್ಯ ಭೂಮಿ ಹಂಚಿಕೆ ಮಾಡಲು ಇಲಾಖೆ ಬಳಿ ಸಮರ್ಪಕ ಭೂಮಿಯೇ ಇಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕೈಗಾರಿಕ ಚಟುವಟಿಕೆ ಸ್ಥಗಿತ ಗೊಂಡಿದ್ದರಿಂದ ಇಲಾಖೆಯು ಕಳೆದೆರಡು ವರ್ಷದಿಂದ ಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು.
ಬೆಂಗಳೂರು ಸಮೀಪದ ದಾಬಸ್ ಪೇಟೆ, ರಾಮನಗರ ಬಳಿಯ ಹಾರೋಹಳ್ಳಿ, ಕೋಲಾರದ ಮಿಂಡ್ ಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪುಸ್ತೇನಹಳ್ಳಿ, ವಿಜಯಪುರದ ಮುಳವಾಡ, ಬಳ್ಳಾರಿಯ ಕುಡಿತಿನ , ಯಾದಗಿರಿಯಲ್ಲಿ ಫಾರ್ಮರ್ ಕ್ಲಸ್ಟರ್ ಮಾಡಲಾಗುವುದು. ಬೆಳಗಾವಿಯ ಕಣಗಲ್ , ಮೈಸೂರಿನ ಇಮ್ಮಾವು, ದಾವಣಗೆರೆ ಜಿಲ್ಲೆಯ ಕುರುಬರಹಳ್ಳಿ, ತುಮಕೂರಿನ ಶಿರಾದಲ್ಲಿ ಈಗಾಗಲೇ ಭೂಪ್ರದೇಶ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...