ಭಾರತದ ಹೊಸದಿಲ್ಲಿ ವಾಯು ಮಾಲಿನ್ಯದಿಂದ ಕೂಡಿರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಆದರೆ ಜಗತ್ತಿನ ಅನೇಕ ನಗರಗಳ ದಿನದಿಂದ ದಿನಕ್ಕೆ ಹದಗೆಟ್ಟಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಮಾಲಿನ್ಯವಾಗಿರುವ 100 ನಗರಗಳಲ್ಲಿ ಭಾರತ, ಚೀನಾ ಪಾಕಿಸ್ತಾನದಲ್ಲೇ 94 ನಗರಗಳಿವೆ. ಭಾರತದಲ್ಲಿ 46, ಚೀನಾ 42, ಪಾಕಿಸ್ತಾನ 6, ಬಾಂಗ್ಲಾದೇಶ 4, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್ ತಲಾ ಒಂದು ನಗರಗಳು ಅತಿ ಹೆಚ್ಚು ಮಾಲಿನ್ಯ ಕೊಳಕಾಗಿರುವ ನಗರಗಳಾಗಿವೆ.
ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳು ಗರ್ಭದಲ್ಲಿರುವ ಶಿಶುವಿನ ಮಿದುಳಿಗೆ ತೊಂದರೆ ಉಂಟುಮಾಡುತ್ತದೆ. ಕಣ್ಣು ಉರಿ, ಪದೇಪದೇ ಕಣ್ಣು ತಿಕ್ಕಿ ಕೆಂಪಾಗುವುದು, ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಹಾಗೂ ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವವಾಯು ಕಾಯಿಲೆ, ಹೃದಯಾಘಾತ ಸಂಭವಿಸುವುದು ಎಂದು ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.