ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಕೆನಡಾ ತಂಡಗಳ ನಡುವೆ ಪಂದ್ಯ ನಡೆಯಿತು.
ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ ಭಾರತ ತಂಡವು 13-1ರಲ್ಲಿ ಭರ್ಜರಿ ಜಯ ದಾಖಲಿಸಿತು.
ಮೊದಲ ಪಂದ್ಯದಲ್ಲಿ ನೀರಸ ಆಟವಾಡಿ ಸೋಲಿಗೆ ಶರಣಾಗಿದ್ದ ಭಾರತ ತಂಡ FIH ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ನಾಯಕ ವಿವೇಕ್ ಪ್ರಸಾದ್ ಸಾಗರ್, ಮಣಿಂದರ್ ಸಿಂಗ್, ಶಾರದಾನಂದ ತಿವಾರಿ, ಹುಂಡಾಲ ಅರಿಜೀತ್ ಸಿಂಗ್ ಮತ್ತು ಅಭಿಷೇಕ್ ಲಕ್ರಾ ಅವರು ಗೋಲು ಬಾರಿಸಿದರು. ಸಂಜಯ್ ಮತ್ತು ಮುಂದಾಲ ಹರಿಜೀತ್ ಸಿಂಗ್ ಗಳಿಸಿದ ಹ್ಯಾಟ್ರಿಕ್ ಗೋಲು ಹಾಗೂ ಉತ್ತಮ ಸಿಂಗ್ ಗಳಿಸಿದ ಎರಡು ಗೋಲುಗಳಿಂದ ಭಾರತ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.
ಪಂದ್ಯದ ಆರನೇ ನಿಮಿಷದಲ್ಲಿಯೇ ಗೋಲು ಬಾರಿಸುವ ಮೂಲಕ ಖಾತೆ ತೆರೆದ ಭಾರತ ತಂಡ ಕೆನಡಾ ತಂಡದ ದುರ್ಬಲ ರಕ್ಷಣಾ ಪಡೆಗೆ ಯಾವುದೇ ಅವಕಾಶ ನೀಡದಂತೆ ಗೋಲುಗಳ ಸುರಿಮಳೆ ಸುರಿಸುವ ಮೂಲಕ ಭಾರತದ ಆಟಗಾರರು ಮೇಲುಗೈ ಸಾಧಿಸಿದರು.