ಹೊಸನಗರ ರಾಮಚಂದ್ರಾಪುರ ಮಠದ ಸಭಾಂಗಣದಲ್ಲಿ ಯಕ್ಷಗಾನ ಕಾರ್ಯಕ್ರಮ ನೆರವೇರಿತು. ಈ ಪ್ರದರ್ಶನದಲ್ಲಿ ರಮೇಶ್ ಹೆಗಡೆ ಗುಂಡೂಮನೆ ರಚಿಸಿದ ನೂತನ ಯಕ್ಷಪ್ರಸಂಗ ‘ಸಿರಿಧೇನು ಮಹಿಮಾ’ ಪುಸ್ತಕ ಬಿಡುಗಡೆಗೊಳಿಸಲಾಯಿತು.
ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷ ಮೇಳ ಗುಂಡೂಮನೆಯವರು ಏರ್ಪಡಿಸಿದ್ದರು. ಈ ಸೇವೆಯಾಟ ದಲ್ಲಿ ರಮೇಶ್ ಹೆಗಡೆ ರಚಿಸಿರುವ ನೂತನ ಯಕ್ಷ ಕೃತಿ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು.

‘ಅತ್ಯಂತ ಸುಲಭವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿ ಯಕ್ಷಗಾನ ಕಲೆ ಹೊಂದಿದೆ’ ಎಂದು ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀ. ಗಜಾನನ ಭಟ್ ತಿಳಿಸಿದರು.
ಹೊಸನಗರ ಪ್ರಧಾನ ಮಠದ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಮಹಾನಂದಿ ಗೋ ಲೋಕದ ಕೃಷ್ಣಪ್ರಸಾದ್ ಎಡಪಾಡಿ, ವಂಶವಾಹಿನಿ ಭಾಗವತರಾದ ಸೂರ್ಯನಾರಾಯಣ ಹೆಗಡೆ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.