ನವದೆಹಲಿ ಶಾಲೆಗಳ ಸಮೀಪದಲ್ಲಿರುವ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸುರಕ್ಷಿತ ಶಾಲಾ ವಲಯಗಳನ್ನು ಸ್ಥಾಪಿಸಲಾಗಿದೆ. ಈ ಪರಿಕಲ್ಪನೆಯನ್ನು ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.
ಸುರಕ್ಷಿತ ಶಾಲಾ ವಲಯ ಎಂದು ಗುರುತಿಸಲಾಗದ ಪ್ರದೇಶದಲ್ಲಿ ಶಾಲೆಗಳ ಹತ್ತಿರ ಇರುವ ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಶಾಲಾ ಮಕ್ಕಳು, ಸಿಬ್ಬಂದಿ, ಪಾಲಕರ ಸಂಚಾರ, ಎಲ್ಲ ವಾಹನಗಳ ಸಂಚಾರ ಈ ರಸ್ತೆಗಳಲ್ಲಿ ಹೆಚ್ಚಾಗಿರುವ ಕಾರಣ, ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಲೆಗೆ ಸಂಬಂಧಿಸಿದ ಆವರಣದಿಂದ 300 ಅಡಿ ದೂರದವರೆಗೆ ಈ ವಲಯ ವ್ಯಾಪ್ತಿ ಇರುತ್ತದೆ. ಇಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿ ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಶಾಲೆ ಆರಂಭಕ್ಕೂ ಮೊದಲೇ ಅಳವಡಿಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನ ಸೇಂಟ್ ಜೋಸೆಫ್ ಹೈ ಸ್ಕೂಲ್, ಚಾಮರಾಜಪೇಟೆಯಲ್ಲಿರುವ 116 ವರ್ಷಗಳ ಹಳೆಯ ಕೋಟೆ ಹೈಸ್ಕೂಲ್ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆಯಾಗಿವೆ.
ಬಹುರಾಷ್ಟ್ರೀಯ ಕಂಪನಿಯಾದ ‘3ಎಂ ಇಂಡಿಯಾ’ದ ಕಾರ್ಯಕ್ರಮವಾದ ” ಯಂಗ್ ಚೇಂಜ್ ಏಜೆಂಟ್ಸ್ ಫಾರ್ ರೋಡ್ ಸೇಫ್ಟಿ” ಹಾಗೂ ಕನ್ಸ ರ್ನ್ ಫಾರ್ ಅಂಡ್ ಪೆಡೆಸ್ಟ್ರಿಯನ್ ಸೇಫ್ಟಿ ಸಹಯೋಗದಲ್ಲಿ, ಬೆಂಗಳೂರಿನ ಸೆಂಟ್ ಜೋಸೆಫ್ ಹೈ ಸ್ಕೂಲ್ ನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಯಿತು.
ದೆಹಲಿಯ ಮಂದಿರ ಮಾರ್ಗದಲ್ಲಿರುವ ಎನ್. ಪಿ ಬಾಯ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್, ಪುಣೆಯ ಜ್ಞಾನ ಪ್ರಮೋಧಿನಿ ಪಾಠಶಾಲೆ, ಗುರು ಗ್ರಾಮದ ಸಿಲ್ವರ್ ಕ್ರೆಸ್ಟ್ ಸ್ಕೂಲ್ ಇನ್ನೂ ಹಲವು ಶಾಲೆಗಳು ಆಯ್ಕೆಯಾಗಿವೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.