Wednesday, October 2, 2024
Wednesday, October 2, 2024

ಕೆ ಲೈವ್ ಸುದ್ದಿ ಸಾಲು

Date:

ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಶ್ರೀ.ಡಿ‌. ಮಂಜುನಾಥ್ ಆಯ್ಕೆಯಾಗಿದ್ದಾರೆ.

———*———

ಶಿವಮೊಗ್ಗದಿಂದ ಬಿಜೆಪಿಯ ಡಿ.ಎಸ್. ಅರುಣ್ ಮತ್ತು ಕಾಂಗ್ರೆಸ್ ನಿಂದ ಹಾಲಿ ಸದಸ್ಯ ಪ್ರಸನ್ನಕುಮಾರ್ ವಿಧಾನ ಪರಿಷತ್ ಗೆ ಸ್ಪರ್ಧಿಸುತ್ತಿದ್ದಾರೆ.

———–***———

ಟಿ-20 ಸರಣಿ ಭಾರತ-ನ್ಯೂಜಿಲೆಂಡ್ ಪಂದ್ಯಾವಳಿ. ಸರಣಿ ಭಾರತದ ಕೈವಶ.
ಭಾರತ- 183-7 (20)
ನ್ಯೂಜಿಲ್ಯಾಂಡ್ – 111 (17.2)

——-****——-

ಭಾರತೀಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ 350ಕ್ಕೂ ಹೆಚ್ಚು ರೈಲುಗಳಲ್ಲಿ ಕ್ಯಾಟರಿಂಗ್ ಸೌಲಭ್ಯವನ್ನು ಆರಂಭಿಸಿದೆ.

———****———

ರಾಜಕುಮಾರ ಮತ್ತು ಯುವರತ್ನ ಚಲನಚಿತ್ರದ ನಿರ್ದೇಶಕರಾದ ಸಂತೋಷ್ ಆನಂದರಾಮ್ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಬಯೋಪಿಕ್ ತಯಾರಿಕೆಯ ಕುರಿತು ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

———-**——–

ನವದೆಹಲಿಯ ದಟ್ಟ ವಾಯುಮಾಲಿನ್ಯದ ಪರಿಣಾಮ ವಾಹನಗಳಿಗೆ ಬಣ್ಣದ ಸ್ಟಿಕರ್ ಅಂಟಿಸಬೇಕೆಂದು ದೆಹಲಿ ಸರ್ಕಾರ ಸೂಚಿಸಿದೆ. ಹೋಲೋಗ್ರಾಮ್ ಸ್ಟಿಕರ್ ಗಳು ಎದುರಿಗೆ ಬಂದ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಲಾಗಿದೆ.

——–***——-

ಭಾರತೀಯ ಸೇನೆಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಪುರಸ್ಕಾರ ನೀಡಲಾಗಿದೆ.

——–**———

ಅಮೆರಿಕದ ಅಧ್ಯಕ್ಷ ಬೈಡೆನ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಶ್ವೇತಭವನದ ಫಿಸಿಶಿಯನ್ ಡಾ.ಕೆವಿನ್ ಒ.ಕೊನರ್ ತಿಳಿಸಿದ್ದಾರೆ.

——-**——–

ಮಿಂಚಿನ ಹಾಗೆ ಕೊವಿಡ್ 5ನೇ ಅಲೆ ಅಪ್ಪಳಿಸಿದೆ -ಫ್ರಾನ್ಸ್ ನ ಸರ್ಕಾರಿ ವಕ್ತಾರ -ಗೇಬ್ರಿಯಲ್ ಅಟ್ಟಾಲ್.

——-**——–

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...