ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಸೋತ ನಂತರ ಕಕ್ಷಿದಾರರು ಕೋರುವ ಸೇವೆಗಳು ಮತ್ತು ಪರಿಹಾರದ ಕೊರತೆಗಾಗಿ ವಕೀಲರನ್ನು ಯಾವಾಗಲೂ ದೂಷಿಸಲಾಗುವುದಿಲ್ಲ. ವಕೀಲರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮಾತ್ರ ನಿಬಂಧನೆಗಳನ್ನು ಅನ್ವಯಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅರ್ಜಿದಾರರೊಬ್ಬರು ಬಿಎಸ್‌ಎನ್‌ಎಲ್ ವಿರುದ್ಧ ದೂರು ದಾಖಲಿಸಿದ್ದರು. ಆ ಮೊಕದ್ದಮೆಯಲ್ಲಿ ಸೋತ ಮೂರು ವಕೀಲರು 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ್ದರು. ಆದರೆ ಆ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಸಂದರ್ಭದಲ್ಲಿ, ವಕೀಲರು ಯಾವುದೇ ಮೊಕದ್ದಮೆಯ ಕಾನೂನು ಹೋರಾಟ ನಡೆಸಿ ಸೋತರೆ ಅವರನ್ನು ದೂಷಿಸಲಾಗುವುದಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ.
ವಕೀಲರ ಸೇವೆ ದೂಷಿಸಬೇಡಿ : ಸುಪ್ರೀಂ ಕೋರ್ಟ್
Date: