ಲಿಖಿಂಪುರ -ಖೇರಿಯಲ್ಲಿ ರೈತರು ಸೇರಿ 8 ಮಂದಿಯ ಹತ್ಯೆ ಪ್ರಕರಣವು ಹೊಸ ತಿರುವು ಪಡೆದಿದೆ. ಕೇಂದ್ರ ಗ್ರಹ ಖಾತೆಯ ರಾಜ್ಯ ಸಚಿವ ಶ್ರೀ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರಾ ಅವರ ಬಂಧೂಕಿನಿಂದ ಹಿಂಸಾಚಾರ ನಡೆದ ದಿನ ಗುಂಡು ಹಾರಿಸಲಾಗಿದೆ ಎಂಬುವುದನ್ನು ವಿಜ್ಞಾನ ವರದಿಯು ದೃಢಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆಶಿಶ್ ಅವರ ಬಂದೂಕು ಮತ್ತು ಅಂಕಿತ ಅವರ ಪಿಸ್ತೂಲಿನಿಂದ ಗುಂಡು ಹಾರಾಟ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಲಿಖಿಂ ಪುರ- ಖೇರಿಯಲ್ಲಿ ಹೇಳಿದ್ದಾರೆ. ಆಶಿಶ್ ಮತ್ತು ಅಂಕಿತ ಅವರೇ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದರು.
ರೈತರ ಮೇಲೆ ಎಸ್ಯುವಿ ವಾಹನ ಹರಿಸಿ ನಾಲ್ವರನ್ನು ಹತ್ಯೆ ಮಾಡಿದ ಆರೋಪ ಆಶಿಶ್ ಮತ್ತು ಅವರ ಗೆಳೆಯ ಅಂಕಿತ್ ದಾಸ್ ಮೇಲೆ ಇದೆ.
ತನಿಖೆ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ಐಆರ್ ದಾಖಲಾಗಿವೆ. ಆಶಿಶ್, ಅಂಕಿತ್ ಮತ್ತು ಇತರರ ವಿರುದ್ಧ ರೈತರು ಎಫ್ಐಆರ್ ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ 17 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತರ ಮೇಲೆ ಹರಿದ ವಾಹನದಲ್ಲಿ ತಾವು ಇರಲಿಲ್ಲ ಎಂದು ಆಶಿಶ್ ಮತ್ತು ಅಜಯ್ ಮಿಶ್ರ ಅವರು ತನಿಖೆ ವೇಳೆ ಹೇಳಿದ್ದರು. ಆದರೆ ಎಸ್ ಯುವಿ ವಾಹನದಲ್ಲಿ ಆಶಿಶ್ ಇದ್ದರು ಎಂದು ರೈತರು ಹೇಳಿದ್ದಾರೆ.
ಹಿಂಸಾಚಾರದ ಬಳಿಕ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಜಯ್ ಮಿಶ್ರ ಅವರು ರಾಜೀನಾಮೆ ಕೊಡಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿತ್ತು. ಆದರೆ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಜೊತೆಗೆ ಅವರು ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಲಿಖಿಂಪುರ -ಖೇರಿ, ರೈತರು ಹತ್ಯೆ-ತನಿಖಾ ಪ್ರಗತಿ
Date: