Sunday, November 16, 2025
Sunday, November 16, 2025

ಮಹಾರಾಷ್ಟ್ರ ಅಸ್ಪತ್ರೆ: ಅಗ್ನಿ ಅನಾಹುತ.

Date:

ಮಹಾರಾಷ್ಟ್ರದಲ್ಲಿನ ಅಹ್ಮದ್ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಗಢ ಸಂಭವಿಸಿದೆ. ಈ ಅಗ್ನಿ ಅವಗಢದಲ್ಲಿ 11 ರೋಗಿಗಳು ಸಜೀವ ದಹನವಾಗಿದ್ದಾರೆ. ಶನಿವಾರ ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಜಿಲ್ಲಾಸ್ಪತ್ರೆಯ ಐಸಿಯು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೃತರಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರ ಇದು ಕೋವಿಡ್ ಸೋಂಕಿನಿಂದ ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಐಸಿಯುನಲ್ಲಿ 20 ಜನ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಅಗ್ನಿ ಅವಘಡ ಸಂಭವಿಸಿದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವ ಅಷ್ಟರಲ್ಲಿ ಅಗ್ನಿ ಕೆನ್ನಾಲಿಗೆಗೆ ಹತ್ತು ಜನ ಬಲಿಯಾಗಿದ್ದು. ಅದರಲ್ಲಿ ಕೆಲವರು ಉಸಿರುಗಟ್ಟಿ ಮೃತ ಪಟ್ಟಿದ್ದರು. ಬೆಂಕಿ ಕಾಣಿಸಿಕೊಂಡ ಕೂಡಲೇ ಐಸಿಯುನಲ್ಲಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗಿದೆ. ಈ ಸಂಬಂಧ ಇಂಧನ ಸಚಿವ ನಿತಿನ್ ರಾವುತ್ ಆದೇಶಿಸಿದ್ದಾರೆ. ಅಗ್ನಿದುರಂತಕ್ಕೆ ನಿರ್ಲಕ್ಷ ಕಾರಣವೆಂದು ತಿಳಿದು ಬಂದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘಟನೆಯಲ್ಲಿ ವೃತ್ತ ಪಟ್ಟವರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಹಾಗೂ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಶಿವಮೊಗ್ಗದ ಎಸ್.ಕೆ.ಮರಿಯಪ್ಪ ಅವರಿಗೆ “ಸಹಕಾರಿ ರತ್ನ” ಪ್ರಶಸ್ತಿ ಪ್ರದಾನ

CM Siddharamaiah ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ 72ನೇ...

World Diabetes Day ಮಧುಮೇಹವನ್ನ ಆರಂಭಿಕ ಪತ್ತೆ ಮತ್ತು ನಿಯಮಿತ ಪರೀಕ್ಷೆ ಮೂಲಕ ನಿಯಂತ್ರಿಸಬಹುದು- ಡಾ.ನಾಗರಾಜ ನಾಯ್ಕ್

World Diabetes Day ಮಧುಮೇಹವು ಸಾಂಕ್ರಾಮಿಕವಲ್ಲದ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಇದನ್ನು...

ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಶಿವಮೊಗ್ಗದ ಜಿ.ಎಂ.ಜಗದೀಶ್ ನಿರ್ದೇಶಕರಾಗಿ ಆಯ್ಕೆ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಗುತ್ತಿಗೆದಾರರ ಸಮಿತಿಗೆ ನಿರ್ದೇಶಕರಾಗಿ ಶಿವಮೊಗ್ಗ...