ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡಿಕೊಳ್ತೇನೆ.ಅಭಿಮಾನಿ ದೇವರುಗಳು ಅಂತ ಅಪ್ಪಾಜಿ ನಿಮ್ಮನ್ನ ಕರೀತಿದ್ದರು. ಈಗಾಗಲೇ ನಮ್ಮ ಕುಟುಂಬ ನೋವಿನಲ್ಲಿದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಂತ ರಾಘವೇಂದ್ರ ರಾಜ್ ಕುಮಾರ್ ಅತ್ಯಂತ ಕಳಕಳಿಯ ಮನವಿ ಮಾಡಿದ್ದಾರೆ.
ನಿಜ.ಹೋದ ಜೀವ ಮತ್ತೆ ಬಾರದು. ಹಾಗೇ ಜೀವ ಕಳೆದುಕೊಂಡರೂ ಅದು ಜೀವಕ್ಕೆ ಜೀವ ಕೊಟ್ಟಂತಾಗುವುದಿಲ್ಲ. ಅಭಿಮಾನ ತೋರಿಸಬೇಕು. ಆದರೆ ಪ್ರಾಣತ್ಯಾಗದಿಂದ ಅಲ್ಲ. ವ್ಯಕ್ತಿಯ ಆದರ್ಶಗಳನ್ನ ಪಾಲಿಸಿದರೆ ಸಾಕು ಅದೇ ಅಪ್ಟಟ ಪ್ರೀತಿ.
ಈಗ ಹಲವಾರು ಕ್ಷೇತ್ರದ ನಾಯಕರು ಅಪ್ಪು ವಿನ ಸಾಮಾಜಿಕ ಕಳಕಳಿ ಮೆಚ್ಚಿದ್ದಾರೆ.ಜೊತೆಗೆ ನೆರವು ನೀಡಿ,ಹೊಣೆಹೊರುವುದಾಗಿಯೂ ಹೇಳಿದ್ದಾರೆ.ಇದು ನೈಜ ಸೇವೆ. ಪುನೀತರ ಆತ್ಮಕ್ಕೂ ಶಾಂತಿ ತರುವ ಕೆಲಸವಾಗುತ್ತದೆ.
ಗೋಶಾಲೆ, ಅನಾಥಾಶ್ರಮ,
ವೃದ್ಧಾಶ್ರಮ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ,ನಿರ್ಗತಿಕರಿಗೆ ಆಶ್ರಯ , ಬಡಮಕ್ಕಳಿಗೆ ಓದಲು ಸಹಾಯ ಹೀಗೆ ಹಲವು ಕ್ಷೇತ್ರಗಳಿವೆ. ಇಂತಹವುಗಳ ಬಗ್ಗೆ ನಮ್ಮ ಅಭಿಮಾನ ವ್ಯಕ್ತಪಡಿಸಬೇಕು. ಅವುಗಳಿಗೆ ನಿಧಿ ಕೂಡಿಸಿ ಬೆಳೆಸಬೇಕು.ಇವತ್ತು ಎಷ್ಟು ಊರುಗಳಲ್ಲಿ ಇಂತಹವುಗಳ ಅಗತ್ಯವಿದೆ? ಬಹಳ ಜರೂರು ಈ ಕುರಿತು ಅಭಿಮಾನಿಗಳು ಸಂಘಟಿತರಾದರೆ ಪುನೀತರ ಆತ್ಮಕ್ಕೆ ಶಾಂತಿ ದೊರಕುತ್ತದೆ.
”ಅಪ್ಪು, ನೀನು ಇನ್ನು ಅಭಿಮಾನಿಗಳಲ್ಲಿಯೇ ಬದುಕುತ್ತಿದೀಯಾ ಎಂಬ ಭಾವನೆ ನನಗೆ ಕಂದ.’ ದೇವರನ್ನು ಪೂಜಿಸುವ ಜಾಗದಲ್ಲಿ ಅಪ್ಪುವಿಗೆ ಕೊಟ್ಟಿರುವ ಈ ಸ್ಥಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು.ಈ ಸಂದರ್ಭದಲ್ಲಿ ಇಂತಹ ಕಾರ್ಯಗಳಿಂದ ನಮಗೆ ಇನ್ನಷ್ಟು ಶಕ್ತಿ ತುಂಬುವ ನಮ್ಮ ನೆಚ್ಚಿನ ಅಭಿಮಾನಿ ದೇವರುಗಳಿಗೆ ನನ್ನ ವಂದನೆಗಳು.- ನಿಮ್ಮ ರಾಘಣ್ಣ” ಎಂದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.